ಭಾರತ, ಮೇ 3 -- ಬಾಲಿವುಡ್ನ ಪ್ರಸಿದ್ಧ ಕಪೂರ್ ಕುಟುಂಬ ಸದಸ್ಯೆ ನಿರ್ಮಲ್ ಕಪೂರ್ ಇಹಲೋಕ ತ್ಯಜಿಸಿದ್ದಾರೆ, ಇವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ವಾರ ಅನಾರೋಗ್ಯ ಕಾರಣದಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ (ಮೇ 2) ಮರಣ ಹೊಂದಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್, ಬೋನಿ ಕಪೂರ್ ಹಾಗೂ ಸಂಜಯ್ ಕಪೂರ್ ತಾಯಿ ನಿರ್ಮಲ್ ಸಾವು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಅಜ್ಜಿಯ ಸಾವಿಗೆ ಮೊಮ್ಮಕ್ಕಳಾದ ಖುಷಿ ಕಪೂರ್, ಜಾಹ್ನವಿ ಕಪೂರ್, ಅರ್ಜುನ್ ಕಪೂರ್ ಸೇರಿ ಕುಟುಂಬಸ್ಥರು ಹಾಗೂ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.
ನಿನ್ನೆ ಸಂಜೆ ಸುಮಾರು 5.25ರ ಹೊತ್ತಿಗೆ ನಿರ್ಮಲ್ ಕೊನೆಯುಸಿರು ಎಳೆದಿದ್ದು, ಅವರ ಪಾರ್ಥಿವ ಶರೀರವನ್ನು ನಿವಾಸಕ್ಕೆ ತರಲಾಗಿದೆ. ತಾಯಿ ಹಾಗೂ ಅಜ್ಜಿಯ ನಿಧನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಮಕ್ಕಳು ಹಾಗೂ ಮೊಮ್ಮಕ್ಕಳು ನಿರ್ಮಲ್ ಅವರ ನಿವಾಸದ ಬಳಿ ಸೇರಿದ್ದಾರೆ. ಅಜ್ಜಿಯ ಸಾವಿನ ಸುದ್ದಿ ಕೇಳಿದ ಜಾಹ್ನವಿ ಗೆಳೆಯ ಶಿಖರ್ ಪಹಾರಿಯಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.