ಭಾರತ, ಮೇ 22 -- ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನ 'ಹಾರ್ಟ್ ಲ್ಯಾಂಪ್'ಗೆ 'ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ' ಒಲಿದ ಸಂದರ್ಭ ಇದು. ಕನ್ನಡಕ್ಕೆ ಬಂದ ಮೊದಲ 'ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ' ಇದು. ಕಥಾ ಸಂಕಲನಕ್ಕೆ ಈ ಗೌರವ ಲಭಿಸುತ್ತಿರುವುದೂ ಇದೇ ಮೊದಲು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆ ಕೂಡ ಕನ್ನಡಿಗರದ್ದೇ. ಹೌದು ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ "ಹಾರ್ಟ್ ಲ್ಯಾಂಪ್" ಕೃತಿ ಹೊರತರಲು ನೆರವಾದವರು. ಕರುನಾಡು, ಕನ್ನಡಿಗರು ಸಂಭ್ರಮ ಪಡುವ ಹೊತ್ತು ಇದು.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಘೋಷಣೆಯಾದ ಕೂಡಲೇ, ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಇಬ್ಬರೂ ಪರಸ್ಪರ ಆಲಿಂಗಿಸಿಕೊಂಡರು. 'ವೈವಿಧ್ಯಕ್ಕೆ ಸಂದ ಗೌರವವಿದು' ಎಂದು ಬಾನು ಮುಷ್ತಾಕ್ ಅವರು ಭಾವುಕರಾಗಿ ಹೇಳಿದರೆ, 'ನನ್ನ ಭಾಷೆಗೆ ಸಂದಿರುವ ಸುಂದರ ಗೆಲುವು ಈ ಪ್ರಶಸ್ತಿ' ಎಂದು ಅನುವಾದಕಿ ದೀಪಾ ಭಾಸ್ತಿ ಪ್ರತಿಕ್ರಿಯಿಸಿದ್ದರು....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.