ಭಾರತ, ಏಪ್ರಿಲ್ 5 -- ಜಗತ್ತಿನಲ್ಲಿ ಎಂಥೆಂಥವರೆಲ್ಲ ಇದ್ದಾರೆ ನೋಡಿ, ಪ್ರಸವಕ್ಕಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದ ಮಹಿಳೆಯರ ಹೆರಿಗೆ ಮಾಡಿಸಿ ಅವರ ಹೊಕ್ಕುಳ ಬಳ್ಳಿ (ಜರಾಯು, ಮಾಸುಚೀಲ) ಕಳವು ಮಾಡುತ್ತಿದ್ದ ವೈದ್ಯನೊಬ್ಬನನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂಬ ಸುದ್ದಿ ಚೀನಾದಿಂದ ವರದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಬಹುಬೇಗ ಹರಿದಾಡಿದ್ದು, ಜನರ ಕುತೂಹಲ ಕೆರಳಿಸಿದೆ. ಹೊಕ್ಕುಳ ಬಳ್ಳಿ ಕಳವು ಮಾಡಿ ಈ ಡಾಕ್ಟರ್ ಅದನ್ನು ಏನು ಮಾಡ್ತಾ ಇದ್ದ, ಅದರಿಂದ ಏನು ಉಪಯೋಗ ಎಂಬಿತ್ಯಾದಿ ಚರ್ಚೆಗಳೂ ಜೋರಾಗಿ ನಡೆದಿವೆ ಎನ್ನಿ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹೆರಿಗೆಯ ನಂತರ ಡಾಕ್ಟರ್ ಪಾಲಿಥೀನ್ ಕವರ್ನಲ್ಲಿ ಹೊಕ್ಕುಳ ಬಳ್ಳಿ ಕೊಂಡೊಯ್ಯುತ್ತಿರುವ ದೃಶ್ಯ ವೈರಲ್ ಆಗಿದೆ. ಸಾಮಾನ್ಯವಾಗಿ ಹೆರಿಗೆ ನಂತರ ಇದನ್ನು ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಡಾಕ್ಟರ್ ಅದೇ ಹೊಕ್ಕುಳ ಬಳ್ಳಿಯನ್ನು ಪಾಲಿಥೀನ್ ಕವರ್ನಲ್ಲಿ ಹಾಕಿ ಕೊಂಡೊಯ್ಯುತ್ತಿದ್ದ ದೃಶ್ಯ ಬಹಿರಂಗವಾದ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.