Bengaluru, ಮೇ 17 -- ಮಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾಗುವ ಸಂದರ್ಭ ಪುಟಾಣಿ ಮಕ್ಕಳ ಆರೈಕೆಗೆ ಡೇಕೇರ್ ಸೆಂಟರ್ಗೆ ದುಡ್ಡು ತೆರಬೇಕು. ಆದರೆ ಬಡ ಉದ್ಯೋಗಸ್ಥ ಮಹಿಳೆಯರು ಏನು ಮಾಡುವುದು? ಇದಕ್ಕಾಗಿಯೇ ಸಣ್ಣ ಮಕ್ಕಳ ಆರೈಕೆಗೆಂದೇ ಅಂಗನವಾಡಿ ಕಂ ಕ್ರಷ್ ಸೆಂಟರ್ ಅನ್ನು ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಕಳೆದ ಸಾಲಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ ಯಶಸ್ವಿಯಾದ ಹಿನ್ನೆಲೆ ಈ ಸಾಲಿನಲ್ಲಿ ರಾಜ್ಯದ ಆಯ್ದ ಕೇಂದ್ರಗಳಲ್ಲಿ ಮುಂದುವರಿಸಲು ರಾಜ್ಯ ಸರಕಾರ ನಿಶ್ಚಯಿಸಿದೆ.
ರಾಜ್ಯದಾದ್ಯಂತ ಈ ಕೇಂದ್ರಗಳು ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಆರಂಭಗೊಳ್ಳುತ್ತಿವೆ. ಮೇ 15ಕ್ಕೆ ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳು ಚಟುವಟಿಕೆಗಳನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಂ ಕ್ರಷ್ ಸೆಂಟರ್ ಪೇಟೆ, ಪಟ್ಟಣಗಳ ಆಯ್ದ ಕೇಂದ್ರಗಳಲ್ಲಿ ಆರಂಭಗೊಳ್ಳುತ್ತಿವೆ.
ಕೇಂದ್ರ ಸರಕಾರದ ಮಿಷನ್ ಶಕ್ತಿಯಡಿ ಅಂಗನವಾಡಿ ಕಂ ಕ್ರಷ್ ಎಂಬ ಪಾಲ್ನಾ ಹೆಸರಿನಡಿ ಈ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.