ಭಾರತ, ಏಪ್ರಿಲ್ 25 -- ಭಾರತ- ಪಾಕ್ ಬಿಕ್ಕಟ್ಟು: ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರದಲ್ಲಿ ಉಗ್ರ ನಿಗ್ರಹದ ಕಡೆಗೆ ಭಾರತ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಗಮನಹರಿಸಿದೆ. ಈಗಾಗಲೇ ಜಮ್ಮು- ಕಾಶ್ಮೀರದಲ್ಲಿ ಕೂಂಬಿಂಗ್ ಆಪರೇಷನ್ ಬಿಗಿಗೊಳಿಸಿದೆ. ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅವರ ಮನೆಗಳ ಶೋಧ, ತಪಾಸಣೆ ನಡೆದಿದೆ. ಈ ನಡುವೆ, ಗಡಿಭಾಗದಲ್ಲಿ ಕೂಡ ಉಗ್ರರು ಒಳನುಸುಳದಂತೆ ತಡೆಯಲು ಭಾರತೀಯ ಸೇನೆ ಹೆಚ್ಚು ನಿಗಾವಹಿಸಿದ್ದು, ಬುಧವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಇದಲ್ಲದೆ, ಸದ್ಯ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆ ತನ್ನ ರಫೇಲ್ ವಿಮಾನಗಳನ್ನು ಗಸ್ತಿಗೆ ನಿಯೋಜಿಸಿದೆ. ಇದು ಪಾಕಿಸ್ತಾನವನ್ನು ತಲ್ಲಣಗೊಳಿಸಿದೆ.
ಭಾರತ- ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ಸಮೀಪ ತನ್ನ ಸೈನಿಕರ ಸಂಖ್ಯೆ ಹೆಚ್ಚಿಸಿದೆ. ಆದರೆ, ಬಂಕರ್ ಒಳಗೆ ಜಾಗೃತರಾಗಿ ಇರುವಂತೆ ಯೋಧರಿಗೆ ಆದೇಶಿಸಿದೆ. ಅಂತಾರಾಷ್ಟ್ರೀಯ ಗಡಿ ಭಾಗದಲ್ಲೂ ಪಾಕಿಸ್ತಾನ ತಳಮಳಕ್ಕೀಡಾಗಿದೆ. ಪಾಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.