ಭಾರತ, ಏಪ್ರಿಲ್ 25 -- ಭಾರತ- ಪಾಕ್ ಬಿಕ್ಕಟ್ಟು: ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರದಲ್ಲಿ ಉಗ್ರ ನಿಗ್ರಹದ ಕಡೆಗೆ ಭಾರತ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಗಮನಹರಿಸಿದೆ. ಈಗಾಗಲೇ ಜಮ್ಮು- ಕಾಶ್ಮೀರದಲ್ಲಿ ಕೂಂಬಿಂಗ್ ಆಪರೇಷನ್ ಬಿಗಿಗೊಳಿಸಿದೆ. ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅವರ ಮನೆಗಳ ಶೋಧ, ತಪಾಸಣೆ ನಡೆದಿದೆ. ಈ ನಡುವೆ, ಗಡಿಭಾಗದಲ್ಲಿ ಕೂಡ ಉಗ್ರರು ಒಳನುಸುಳದಂತೆ ತಡೆಯಲು ಭಾರತೀಯ ಸೇನೆ ಹೆಚ್ಚು ನಿಗಾವಹಿಸಿದ್ದು, ಬುಧವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಇದಲ್ಲದೆ, ಸದ್ಯ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆ ತನ್ನ ರಫೇಲ್ ವಿಮಾನಗಳನ್ನು ಗಸ್ತಿಗೆ ನಿಯೋಜಿಸಿದೆ. ಇದು ಪಾಕಿಸ್ತಾನವನ್ನು ತಲ್ಲಣಗೊಳಿಸಿದೆ.

ಭಾರತ- ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ಸಮೀಪ ತನ್ನ ಸೈನಿಕರ ಸಂಖ್ಯೆ ಹೆಚ್ಚಿಸಿದೆ. ಆದರೆ, ಬಂಕರ್‌ ಒಳಗೆ ಜಾಗೃತರಾಗಿ ಇರುವಂತೆ ಯೋಧರಿಗೆ ಆದೇಶಿಸಿದೆ. ಅಂತಾರಾಷ್ಟ್ರೀಯ ಗಡಿ ಭಾಗದಲ್ಲೂ ಪಾಕಿಸ್ತಾನ ತಳಮಳಕ್ಕೀಡಾಗಿದೆ. ಪಾಕ್...