ಭಾರತ, ಏಪ್ರಿಲ್ 24 -- ಪಹಲ್ಗಾಮ್‌ ದಾಳಿ- ಮುಂದೇನು?: ಪಹಲ್ಗಾಮ್ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟ ಬೆನ್ನಿಗೆ ಭಾರತ ಸರ್ಕಾರ ಮೊದಲ ಕ್ರಮವಾಗಿ ಪಾಕಿಸ್ತಾನದ ವಿರುದ್ಧ 5 ಕ್ರಮಗಳ ಘೋಷಿಸಿದೆ. (1) ಸಿಂಧೂ ಜಲ ಸಹಕಾರ ಸ್ಥಗಿತ, (2) ಅಟ್ಟಾರಿ-ವಾಘಾ ಗಡಿ ಬಂದ್ (3) ಭಾರತಕ್ಕೆ ಪಾಕ್‌ ಪ್ರಜೆಗಳ ಪ್ರವೇಶ ನಿಷೇಧ (4) ದೆಹಲಿಯ ಪಾಕ್ ಹೈಕಮಿಷನ್‌ನ ಸೇನಾ ಸಲಹೆಗಾರರ ಉಚ್ಚಾಟನೆ (5) ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಸಿಬ್ಬಂದಿ ಸಂಖ್ಯೆ 55 ರಿಂದ 30ಕ್ಕೆ ಇಳಿಕೆ - ಈ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಆದರೂ, ಸಾರ್ವಜನಿಕ ವಲಯದಲ್ಲಿ ಭಾರತ ಸರ್ಕಾರ ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳ ಬಗ್ಗೆ ಚಿಂತನ-ಮಂಥನ ನಡೆದಿದೆ. ಅಂತಹ 10 ಸಾಧ್ಯತೆಗಳ ವಿವರ ಇಲ್ಲಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಪೈಕಿ ಪುರುಷರನ್ನಷ್ಟೇ ಕೊಂದು ಅವರ ಪತ್ನಿ, ಮಕ್ಕಳಿಗೆ "ಹೋಗಿ ಮೋದಿಗೆ ಹೇಳಿ" ಎಂದು ಹೇಳಿ ಕಳುಹಿಸಿದ್ದಾರೆ. ಇದೊಂದು ರೀತಿಯಲ್ಲಿ ಭಾರತ ಸರ್ಕಾರವನ್ನು ಕೆಣಕಿದಂತಾಗಿದ್ದು, ಪಹಲ್ಗಾಮ್‌ ಉಗ್ರ ದಾಳಿಗೆ ಪ್ರತಿಯಾಗಿ ಭಾ...