ಭಾರತ, ಮೇ 1 -- ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಶ್ವಾನಪ್ರಿಯೆ ಅನ್ನೋದು ಸಿನಿಮಾಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ. ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಮೋಹಕತಾರೆ ಈಗ ಶ್ವಾನದ ಸುತ್ತ ಸಾಗುವ ಜವಾರಿ ಭಾಷೆಯ ಪಪ್ಪಿ ಸಿನಿಮಾದ ಕಂಟೆಂಟ್ ಗೆ ಪದ್ಮಾವತಿ ಫಿದಾ ಆಗಿದ್ದಾರೆ.
ರಮ್ಯಾ ಈ ಹಿಂದೆಯೇ ಪಪ್ಪಿ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದರು. ಇಂದು ಈ ಸಿನಿಮಾ ಕಂಡಿದೆ. ಶ್ವಾನ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಮಕ್ಕಳ ನಟನೆಗೆ ಮನಸೋತಿರುವ ರಮ್ಯಾ ಅವರಿಗೆ ಸೈಕಲ್ ಗಿಫ್ಟ್ ಮಾಡಿದ್ದಾರೆ.
ಪಪ್ಪಿ ಸಿನಿಮಾದಲ್ಲಿ ಬಾಲ ಕಲಾವಿದರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಈ ಮಕ್ಕಳ ನಟನೆ ಇಷ್ಟಪಟ್ಟು ರಮ್ಯಾ ಅವರಿಗೆ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ.
ಅಪ್ಪಟ ಉತ್ತರ ಕರ್ನಾಟಕದ ಭಾಷೆ ಒಳಗೊಂಡ ಕೌಟುಂಬಿಕ ಚಿತ್ರವಾಗಿರುವ ಪಪ್ಪಿ ಇಂದು ಬಿಡುಗಡೆಯಾಗಿದೆ. ರಮ್ಯಾ ಕೂಡ ಶೀಘ್ರದಲ್ಲೇ ಸಿನಿಮಾ ನೋಡಲಿದ್ದಾರೆ. ಧ್ರುವ ಸರ್ಜಾ ಅರ್ಪಿಸಿರುವ ಈ ಸಿನಿಮಾಗೆ ಆಯುಷ್ ಮಲ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.