Bengaluru, ಮೇ 26 -- ಇನ್ನೇನು ಮೇ ತಿಂಗಳು ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಆ ಐದು ದಿನಗಳಲ್ಲಿ ಘಟಾನುಘಟಿ ಸ್ಟಾರ್‌ ನಟರ ಸಿನಿಮಾಗಳು ಒಟಿಟಿ ಅಂಗಳಕ್ಕೆ ಆಗಮಿಸಲಿವೆ. ತಮಿಳು ನಟ ಸೂರ್ಯ ಅಭಿನಯದ ʻರೆಟ್ರೋʼ, ಸಲ್ಮಾನ್‌ ಖಾನ್‌ ನಟನೆಯ ʻಸಿಕಂದರ್‌ʼ, ತೆಲುಗು ನಟ ನಾನಿ ನಟನೆಯ ʻಹಿಟ್‌ 3ʼ ಸಿನಿಮಾಗಳು ಈ ವಾರ ಒಟಿಟಿಗೆ ಬರಲಿವೆ. ಈ ಮೂಲಕ ಒಂದೇ ವಾರದಲ್ಲಿ ಮೂವರು ಸ್ಟಾರ್‌ ನಟರ ಸಿನಿಮಾಗಳು ಒಟಿಟಿಗೆ ಬಂದಂತಾಗಲಿವೆ.

ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ನ ಮೂರು ಸ್ಟಾರ್‌ ಹೀರೋಗಳ ಬಿಗ್‌ ಬಜೆಟ್‌ನ ಮೂರು ಸಿನಿಮಾಗಳು ನೆಟ್‌ಫ್ಲಿಕ್ಸ್‌ ಒಟಿಟಿಗೆ ಆಗಮಿಸಲಿವೆ. ಇವುಗಳಲ್ಲಿ ನಾನಿ ಅಭಿನಯಿಸಿದ ಹಿಟ್ 3 ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರೆ, ʻರೆಟ್ರೋʼ, ʻಸಿಕಂದರ್ʼ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿವೆ. ಇದೀಗ ಈ ಸಿನಿಮಾಗಳಿಗೆ ಒಟಿಟಿಯಲ್ಲಿ ಅದ್ಯಾವ ರೀತಿಯ ರೆಸ್ಪಾನ್ಸ್‌ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ...