Bengaluru, ಮೇ 22 -- ಅರ್ಥ: ಪ್ರಕೃತಿಯನ್ನೂ ಜೀವಿಯನ್ನೂ ಮತ್ತು ಗುಣಗಳ ಪರಸ್ಪರ ಪ್ರಕ್ರಿಯೆಯನ್ನೂ ಕುರಿತ ಈ ತತ್ವಜ್ಞಾನವನ್ನು ಅರ್ಥಮಾಡಿಕೊಂಡವನು ಮುಕ್ತಿಯನ್ನು ಪಡೆಯುವುದು ನಿಶ್ಚಯ. ಅವನ ಪ್ರಸ್ತುತ ಸ್ಥಿತಿ ಏನೇ ಆಗಿರಲಿ, ಅವನು ಇಲ್ಲಿ ಮತ್ತೆ ಹುಟ್ಟುವುದಿಲ್ಲ.

ಭಾವಾರ್ಥ: ಐಹಿಕ ಪ್ರಕೃತಿ, ಪರಮಾತ್ಮ, ಜೀವಿ ಮತ್ತು ಅವರ ಪರಸ್ಪರ ಪ್ರತಿಕ್ರಿಯೆ ಇವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದರಿಂದ ಮನುಷ್ಯನು ಮತ್ತೆ ಈ ಐಹಿಕ ಪ್ರಕೃತಿಗೆ ಹಿಂದಿರುಗುವ ಒತ್ತಾಯವಿಲ್ಲದೆ ಮುಕ್ತನಾಗುವುದಕ್ಕೆ ಆಧ್ಯಾತ್ಮಿಕ ವಾತಾವರಣಕ್ಕೆ ತಿರುಗಲು ಅರ್ಹನಾಗುತ್ತಾನೆ. ಇದು ಜ್ಞಾನದ ಫಲ. ಜೀವಿಯು ಅಕಸ್ಮಾತ್ತಾಗಿ ಈ ಐಹಿಕ ಅಸ್ತಿತ್ವದಲ್ಲಿ ಬಿದ್ದು ಬಿಟ್ಟಿದ್ದಾನೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಜ್ಞಾನದ ಉದ್ದೇಶ. ಅಧಿಕಾರಿಗಳು, ಸಂತಸದೃಶ ಜನರು ಮತ್ತು ಗುರು ಇವರ ಸಹವಾಸದಲ್ಲಿ ಮನುಷ್ಯನು ತಾನೇ ಪ್ರಯತ್ನಿಸಿ ತನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು; ಅನಂತರ ದೇವೋತ್ತಮ ಪುರುಷನು ವಿವರಿಸಿದಂತೆ ಭಗವದ್ಗೀತೆಯನ್ನು ಅರ್...