ಭಾರತ, ಏಪ್ರಿಲ್ 1 -- Stock market today: ಭಾರತದ ಷೇರುಪೇಟೆಗಳು 2025-26ನೇ ಹಣಕಾಸು ವರ್ಷದ ಆರಂಭದಲ್ಲಿ ಮುಗ್ಗರಿಸಿ ಬಿದ್ದಿವೆ. ಸೋಮವಾರ ಮತ್ತು ಮಂಗಳವಾರದ ಟ್ರೇಡಿಂಗ್ನಲ್ಲಿ ಭಾರಿ ಕುಸಿತ ಅನುಭವಿಸಿರುವ ಷೇರುಪೇಟೆ ಇಂದು (ಏಪ್ರಿಲ್ 1) ಒಂದೇ ದಿನ ಶೇಕಡ 1.5ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಷೇರುಪಟ್ಟಿಯಲ್ಲಿರುವ 196 ಸ್ಟಾಕ್ಗಳು 52 ವಾರಗಳ ಕನಿಷ್ಠ ಮಟ್ಟ ತಲುಪಿದರೆ, 76 ಷೇರುಗಳು 52 ವಾರಗಳ ಗರಿಷ್ಠ ಮಟ್ಟ ತಲುಪಿವೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಪ್ರತಿ ಸುಂಕದ ಆತಂಕ ಮುಖ್ಯ ಕಾರಣ. ಭಾನುವಾರ ಟ್ರಂಪ್ ಅವರು ಪ್ರತಿ ಸುಂಕದ ವಿಚಾರ ಪ್ರಸ್ತಾಪಿಸಿದ ಬಳಿಕ ಅಮೆರಿಕದ ಮಾರುಕಟ್ಟೆಗಳಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಿದೆ. ಇದರ ಪರಿಣಾಮ ಭಾರತದ ಷೇರುಪೇಟೆ ಮೇಲೆ ನಿನ್ನೆಯಿಂದ ಆಗುತ್ತಿದ್ದು, ಇಂದು ಮುಂದುವರಿದಿದೆ. ಅಮೆರಿಕದ ನಡೆಯು ಜಾಗತಿಕ ವ್ಯಾಪಾರ ಯುದ್ಧಕ್ಕೆ ವೇದಿಕೆ ಒದಗಿಸಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಆತಂಕ ಉದ್ಯಮ ವಲಯದಲ್ಲಿ ಕಂಡುಬಂದಿದೆ.
ಅಮೆರಿಕದ ಪ್ರತಿ ಸುಂಕದ ಕಾರಣ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.