ಭಾರತ, ಏಪ್ರಿಲ್ 28 -- ಬಾಬಾ ವಂಗಾ ಬಲ್ಗೇರಿಯಾ ಮೂಲದ ಕಾಲಜ್ಞಾನಿ. ಕುರುಡರಾಗಿದ್ದ ಆಕೆ ಜಗತ್ತಿಗೆ ಸಂಬಂಧಿಸಿ ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದರು. ಆ ಕಾಲದಲ್ಲಿ ಅವರು ಹೇಳಿದ್ದ ಅದೆಷ್ಟು ಭವಿಷ್ಯವಾಣಿಗಳು ಈಗ ಸತ್ಯವಾಗುತ್ತಿವೆ. ಆ ಕಾರಣದಿಂದ ವಂಗಾ ಬಾಬಾ ಭವಿಷ್ಯವಾಣಿಗಳು ಇತ್ತೀಚೆಗೆ ಸಖತ್ ಫೇಮಸ್ ಆಗುತ್ತಿವೆ. ಬಾಬಾ ವಂಗಾ ಆ ಕಾಲದಲ್ಲೇ ಮೊಬೈಲ್ ಫೋನ್‌ಗಳ ಬಗ್ಗೆ ಭವಿಷ್ಯ ನುಡಿದಿದ್ದರು ಮತ್ತು ಅದು ಈಗ ಸತ್ಯವಾಗಿದೆ ಕೂಡ. ಬಾಬಾ ವಂಗಾ ಮುಂದೊಂದು ದಿನ ಮೊಬೈಲ್ ಫೋನ್‌ಗಳು ಮನುಷ್ಯ ದೇಹದ ಭಾಗದಂತಾಗುತ್ತದೆ ಎಂದು ಹೇಳಿದ್ದರು. ಆಗ ಜನರು ಆ ಮಾತಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಆ ಮಾತು ಈಗ ಅಕ್ಷರಶಃ ನಿಜವಾಗಿದೆ.

ಬಾಬಾ ವಂಗ ತನ್ನ ಭವಿಷ್ಯವಾಣಿಯಲ್ಲಿ ಮುಂದೊಂದು ದಿನ ಜನರು ಈ ಸಾಧನವಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಫೋನ್‌ಗಳು ನಮ್ಮ ನಡವಳಿಕೆ, ನಾವು ಯೋಚಿಸುವ ರೀತಿ ಮತ್ತು ನಾವು ಇತರರೊಂದಿಗೆ ಸಂಪರ್ಕ ಸಾಧಿಸುವ ರೀತಿಯನ್ನು ಬದಲಿಸುತ್ತವೆ ಎಂದು ಆಕೆ ಹೇಳಿದ್ದರು. ಈ ಹೊತ್ತಿಗೆ ಅದು ನಿ...