Bengaluru, ಫೆಬ್ರವರಿ 7 -- Naa Ninna Bidalaare Serial: ಜನವರಿ 27ರಿಂದ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಪ್ರಸಾರ ಆರಂಭಿಸಿದೆ. ಪ್ರಸಾರ ಆರಂಭಿಸಿದ ಮೊದಲ ವಾರವೇ ದಾಖಲೆಯ ಟಿಆರ್ಪಿ ಗಿಟ್ಟಿಸಿಕೊಳ್ಳುವ ಮೂಲಕ ಕರುನಾಡಿನ ಮನೆ ಮಂದಿಯ ಇಷ್ಟದ ಧಾರಾವಾಹಿಯಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ಈ ಸೀರಿಯಲ್ ಪ್ರಸಾರವಾಗುತ್ತಿದ್ದು, ಮೊದಲ ವಾರವೇ 7.8 ಟಿವಿಆರ್ ಪಡೆದುಕೊಂಡಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪುಟಾಣಿ ಹಿತಾ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದೆ.
ನಾ ನಿನ್ನ ಬಿಡಲಾರೆ ಸೀರಿಯಲ್ ಮೇಕಿಂಗ್ನಿಂದ ಮಾತ್ರವಲ್ಲದೆ, ಶೀರ್ಷಿಕೆ ಗೀತೆಯಿಂದಲೂ ವೀಕ್ಷಕರ ಗಮನ ಸೆಳೆದಿದೆ. ಈ ಶೀರ್ಷಿಕೆ ಗೀತೆಯನ್ನು ಹಿತಾ ಪಾತ್ರಧಾರಿ ಮಹಿತಾ ಅಷ್ಟೇ ಚೆಂದವಾಗಿ ಸೀರಿಯಲ್ ಅಮ್ಮನ ಮಡಿಲಲ್ಲಿ ಕೂತು ಹಾಡಿದ್ದಾಳೆ. ಆ ಪುಟ್ಟ ಹುಡುಗಿಯ ಧ್ವನಿಗೆ ಆ ಹಾಡಿನ ಮೆರುಗು ಮತ್ತಷ್ಟು ಹೆಚ್ಚಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಮಹಿತಾ ಹಂಚಿಕೊಂಡಿದ್ದೇ ತಡ,...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.