Bengaluru, ಫೆಬ್ರವರಿ 7 -- Naa Ninna Bidalaare Serial: ಜನವರಿ 27ರಿಂದ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಪ್ರಸಾರ ಆರಂಭಿಸಿದೆ. ಪ್ರಸಾರ ಆರಂಭಿಸಿದ ಮೊದಲ ವಾರವೇ ದಾಖಲೆಯ ಟಿಆರ್‌ಪಿ ಗಿಟ್ಟಿಸಿಕೊಳ್ಳುವ ಮೂಲಕ ಕರುನಾಡಿನ ಮನೆ ಮಂದಿಯ ಇಷ್ಟದ ಧಾರಾವಾಹಿಯಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ಈ ಸೀರಿಯಲ್‌ ಪ್ರಸಾರವಾಗುತ್ತಿದ್ದು, ಮೊದಲ ವಾರವೇ 7.8 ಟಿವಿಆರ್‌ ಪಡೆದುಕೊಂಡಿದೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪುಟಾಣಿ ಹಿತಾ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದೆ.

ನಾ ನಿನ್ನ ಬಿಡಲಾರೆ ಸೀರಿಯಲ್‌ ಮೇಕಿಂಗ್‌ನಿಂದ ಮಾತ್ರವಲ್ಲದೆ, ಶೀರ್ಷಿಕೆ ಗೀತೆಯಿಂದಲೂ ವೀಕ್ಷಕರ ಗಮನ ಸೆಳೆದಿದೆ. ಈ ಶೀರ್ಷಿಕೆ ಗೀತೆಯನ್ನು ಹಿತಾ ಪಾತ್ರಧಾರಿ ಮಹಿತಾ ಅಷ್ಟೇ ಚೆಂದವಾಗಿ ಸೀರಿಯಲ್‌ ಅಮ್ಮನ ಮಡಿಲಲ್ಲಿ ಕೂತು ಹಾಡಿದ್ದಾಳೆ. ಆ ಪುಟ್ಟ ಹುಡುಗಿಯ ಧ್ವನಿಗೆ ಆ ಹಾಡಿನ ಮೆರುಗು ಮತ್ತಷ್ಟು ಹೆಚ್ಚಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಹಾಡನ್ನು ಮಹಿತಾ ಹಂಚಿಕೊಂಡಿದ್ದೇ ತಡ,...