ಭಾರತ, ಮೇ 13 -- ಮಾವಿನ ಸೀಸನ್ ಶುರುವಾಗಲಿ ಎಂದು ವರ್ಷಪೂರ್ತಿ ಕಾಯುವವರು ನಮ್ಮ ನಡುವೆ ಇದ್ದಾರೆ. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣಿಗೆ ವಿಶೇಷ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಸಾಕಷ್ಟು ವಿಧದ ಮಾವಿನ ಹಣ್ಣುಗಳು ಸಿಗುತ್ತವೆ. ಈ ಎಲ್ಲವೂ ಒಂದಕ್ಕಿಂತ ಒಂದು ರುಚಿ, ಸಿಹಿಯನ್ನು ಹೊಂದಿರುತ್ತವೆ. ಈ ಮಾವಿನ ವಿಧಗಳಲ್ಲಿ ಒಂದು ಅಲ್ಫೋನ್ಸೊ. ಬಹಳ ವಿಶಿಷ್ಟವಾದ ರುಚಿಯನ್ನು ಹೊಂದಿರುವ ಅಲ್ಫೋನ್ಸೊ ಮಾವಿನ ಹಣ್ಣಿನ ಸವಿ ತಿಂದವರಿಗಷ್ಟೇ ಗೊತ್ತು.
ನೀವು ಅಲ್ಫೋನ್ಸೊ ಮಾವಿನ ಪ್ರೇಮಿಯಾಗಿದ್ದರೆ ಅದರ ಇತಿಹಾಸದ ಬಗ್ಗೆಯೂ ತಿಳಿಯಲೇಬೇಕು. ಇದು 400 ವರ್ಷಗಳ ಹಿಂದೆ ಪೋರ್ಚುಗೀಸರು ನಮಗಾಗಿ ಕೊಟ್ಟ ಅದ್ಭುತ ಉಡುಗೊರೆ ಇದು ಎಂದರೂ ತಪ್ಪಾಗಲಿಕ್ಕಿಲ್ಲ.
ಮಾವಿನ ಹಣ್ಣುಗಳು ನಮ್ಮಂತಹ ಸಾಮಾನ್ಯ ಜನರಿಗೆ ಮಾತ್ರವಲ್ಲ, ರಾಜರಿಗೂ ತುಂಬಾನೇ ಇಷ್ಟವಾಗುತ್ತಿತ್ತು. ಆದರೆ ಎಲ್ಲಾ ರೀತಿಯ ಮಾವಿನ ಹಣ್ಣುಗಳನ್ನು ಎಚ್ಚರಿಕೆಯಿಂದ ಕತ್ತರಿಸಲು ಸಾಧ್ಯವಾಗುವುದಿಲ್ಲ. ಕೆಲವು ಮಾವಿನ ಹಣ್ಣುಗಳು ನಾರಿನಿಂದ ಕೂಡಿರುತ್ತವೆ. ಅವುಗಳನ್ನು ಕತ್ತರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.