ಭಾರತ, ಏಪ್ರಿಲ್ 3 -- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA)ಯಲ್ಲಿ ವಂಚಿಸಿದ ಆರೋಪದ ಮೇಲೆ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ ಸಹೋದರಿ, ಅವರ ಅತ್ತೆ ಮತ್ತು ಇತರ ಸಂಬಂಧಿಕರು ಬಂಧನದ ಭೀತಿಗೆ ಸಿಲುಕಿದ್ದಾರೆ. ಎಂ-ನರೇಗಾ ಯೋಜನೆಯಲ್ಲಿ ಅಕ್ರಮವಾಗಿ ಹಣ ಪಡೆದ ಆರೋಪದಡಿ ಶಮಿ ಅವರ ಸಹೋದರಿ ಸೇರಿದಂತೆ 18 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಎಂ-ನರೇಗಾಗೆ ಸಂಬಂಧಿಸಿದ ವಂಚನೆಯ ಬಗ್ಗೆ ಜಿಲ್ಲಾ ಮಟ್ಟದ ತನಿಖೆಯಲ್ಲಿ ಶಮಿ ಅವರ ಸಂಬಂಧಿಕರು ಸೇರಿದಂತೆ ಹಲವಾರು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಶಮಿ ಅವರ ಸಹೋದರಿಯ ಅತ್ತೆಯೂ ಆಗಿರುವ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಪಲೌಲಾ ಗ್ರಾಮದ ಮುಖ್ಯಸ್ಥೆ ಗುಲೆ ಆಯೇಷಾ ಈ ಹಗರಣದ ಕೇಂದ್ರಬಿಂದುವಾಗಿದ್ದಾರೆ. ಎಂ-ನರೇಗಾ ವೇತನ ವಿತರಣೆಯಲ್ಲಿ ಅಕ್ರಮ ಹಣ ಪಡೆದಿರುವುದು ದೃಢಪಟ್ಟಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ನಿಧಿ ಗುಪ್ತಾ ವತ್ಸ್ ಅವರು ಏಪ್ರಿಲ್ 3ರ ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.