ಭಾರತ, ಮೇ 12 -- ಕನ್ನಡ ಕಿರುತೆರೆಯ ರಿಯಾಲಿಟಿ ಶೋ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕವೇ ಮನೆ ಮಾತಾಗಿದ್ದ ನಟ ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ. ಕೇವಲ 33ನೇ ವಯಸ್ಸಿಗೆ ಹೃದಯಾಘಾತ ಅನ್ನೋ ಹೆಮ್ಮಾರಿ, ಒಂದು ಮನೆಯನ್ನೇ ಮುರಿದಿದೆ. ಅಪ್ಪ ತೀರಿಹೋದ ಬಳಿಕ ಅಮ್ಮ ಮತ್ತು ತಂಗಿಗೆ ಆಸರೆಯಾಗಿದ್ದ, ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ರಾಕೇಶ್ ಪೂಜಾರಿ, ಇದೀಗ ವಿಧಿಯ ಆಟಕ್ಕೆ ಉಸಿರು ನಿಲ್ಲಿಸಿದ್ದಾರೆ. ಈ ಹಾಸ್ಯ ಕಲಾವಿದನ ಅಂತ್ಯಕ್ರಿಯೆ ಉಡುಪಿಯ ಕಾರ್ಕಳದ ಬಳಿಯ ನಿಟ್ಟೆ ಗ್ರಾಮದಲ್ಲಿ ಸಾವಿರಾರು ಮಂದಿಯ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಅಂತಿಮಯಾತ್ರೆ ಬಳಿಕ, ಪಾರ್ಥೀವ ಶರೀರವನ್ನು ಚಿತಾಗಾರಕ್ಕೆ ತಂದು, ಉರುವಲುಗಳ ಮೇಲೆ ಮಲಗಿಸಿ, ಕೆಂಪು ಮತ್ತು ಬಿಳಿ ಬಟ್ಟೆಯನ್ನು ಹೊದಿಸಿ, ಬಾಯಲ್ಲಿ ನೀರು ಪ್ರೋಕ್ಷಣೆ ಮಾಡಲಾಯಿತು. ಕರಾವಳಿಯ ಹಿಂದೂ ಸಂಪ್ರದಾಯದ ಪ್ರಕಾರ, ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ʻಕಾಂತಾರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.