Bangalore, ಮೇ 14 -- ದೆಹಲಿ: ಒಂದೇ ಸಂಖ್ಯೆಯನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ಸಮಸ್ಯೆಯನ್ನು ಚುನಾವಣಾ ಆಯೋಗ ಪರಿಹರಿಸಿದೆ. ಅಂತಹ ಕಾರ್ಡ್ ಗಳನ್ನು ಹೊಂದಿರುವ ಮತದಾರರಿಗೆ ಹೊಸಸಂಖ್ಯೆಗಳೊಂದಿಗೆ ಹೊಸ ಗುರುತಿನ ಚೀಟಿ ನೀಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 20 ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದೂ ಹೇಳಿದೆ.ಒಂದೇ ರೀತಿಯ ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ಸಂಖ್ಯೆಯಿರುವ ಮತದಾರರ ಗುರುತಿನ ಚೀಟಿಗಳು ಅತಿ ಕಡಿಮೆ ಸಂಖ್ಯೆಯಲ್ಲಿವೆ. ಇಂತಹ ಗುರುತಿನ ಚೀಟಿಗಳು ಭಾರಿ ಪ್ರಮಾಣದಲ್ಲೇನೂ ಇಲ್ಲ. 10.50 ಲಕ್ಷ ಮತಗಟ್ಟೆಗಳ ಪೈಕಿ ನಾಲ್ಕು ಮತಗಟ್ಟೆಗಳಲ್ಲಿಒಂದು ಇರಬಹುದು. ಇದರಿಂದ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾ ಆಯೋಗದ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೂತ್ ಮಟ್ಟದಲ್ಲಿ ನಡೆದ ಪರಿಶೀಲನೆ ಸಂದರ್ಭದಲ್ಲಿ ಒಂದೇ ರೀತಿಯ ಎಪಿಕ್ ಸಂಖ್ಯೆಯಿರುವ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಮತದಾರರು ನೈಜ ಮತದಾರರಾಗಿದ್ದಾರೆ. ಆದರೆ ಅವರು ಬೇರೆ ಬೇರೆ ಮತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.