ಭಾರತ, ಏಪ್ರಿಲ್ 6 -- ಐಪಿಎಲ್ನಲ್ಲಿ ಎಂಎಸ್ ಧೋನಿ (MS Dhoni) ನಿವೃತ್ತಿ ಕುರಿತು ಚರ್ಚೆ ಹೆಚ್ಚುತ್ತಿದೆ. ಸಿಎಸ್ಕೆ (Chennai Super Kings) ತಂಡದ ಪರ ಹಲವು ವರ್ಷಗಳಿಂದ ಆಡುತ್ತಿರುವ ಧೋನಿ, ಇತ್ತೀಚೆಗೆ ತಂಡದ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲಾಗುತ್ತಿಲ್ಲ. ಇದು ಖುದ್ದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ನಿನ್ನೆಯಷ್ಟೇ (ಏಪ್ರಿಲ್ 5, ಶನಿವಾರ) ಸಿಎಸ್ಕೆ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿ ತವರಿನಲ್ಲೇ ಸೋಲು ಕಂಡಿತ್ತು. ಪಂದ್ಯದ ವೇಳೆ ಧೋನಿ ಪೋಷಕರು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಇದು ಮಾಹಿ ಅವರ ಕೊನೆಯ ಐಪಿಎಲ್ ಪಂದ್ಯ ಎಂಬ ಚರ್ಚೆ ಶುರುವಾಯ್ತು. ಇದರ ನಡುವೆ, ಧೋನಿ ಪತ್ನಿ ಸಾಕ್ಷಿ ಧೋನಿ ಹಾಗೂ ಮಗಳು ಝಿವಾ ಅವರೊಂದಿಗಿನ ಸಂಭಾಷಣೆಯ ಸಣ್ಣ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಸಮಯದಲ್ಲಿ, ಸಾಕ್ಷಿ ಅವರನ್ನು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.