ಭಾರತ, ಮೇ 7 -- 'ಟಗರು ಪಲ್ಯ' ಚಿತ್ರದ ನಂತರ 'ನೆನಪಿರಲಿ' ಪ್ರೇಮ್ ಮಗಳು ಅಮೃತಾ ಪ್ರೇಮ್, 'ಅಮ್ಮು' ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಅದು ಬಿಟ್ಟು ಬೇರೆ ಯಾವ ಚಿತ್ರವನ್ನೂ ಅವರು ಒಪ್ಪಿರಲಿಲ್ಲ. ಇದೀಗ ಅಮೃತಾ ಸದ್ದಿಲ್ಲದೆ ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಅವರು ಧೀರೇನ್ ರಾಮ್ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
'ಶಿವ 143' ಚಿತ್ರದ ನಂತರ ಧೀರೇನ್, ಒಂದೆರಡು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತಾದರೂ, ಯಾವುದೇ ಚಿತ್ರವೂ ಸೆಟ್ಟೇರಿರಲಿಲ್ಲ. ಇದೀಗ ಅವರು ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರಕ್ಕೆ 'ಪಬ್ಬಾರ್' ಎಂದು ಹೆಸರಿಡಲಾಗಿದೆ. ಈ ಹಿಂದೆ 'ಶಾಖಾಹಾರಿ' ಚಿತ್ರವನ್ನು ನಿರ್ದೇಶಿಸಿದ್ದ ಸಂದೀಪ್ ಸುಂಕದ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಧೀರೇನ್ಗೆ ನಾಯಕಿಯಾಗಿ ಅಮೃತಾ ನಟಿಸುತ್ತಿರುವುದು ವಿಶೇಷ. ಈ ಚಿತ್ರದ ಮುಹೂರ್ತ ಇಂದು ನಡೆಯಲಿದೆ.
ಧೀರೇನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.