ಭಾರತ, ಫೆಬ್ರವರಿ 17 -- ಧಾರವಾಡ: ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳೆರಡು ಒಂದಾಗಿ ಬದುಕಿ ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದಾರೆ. ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿ ಈಶ್ವರ ಆರೇರ (82 ) ಹಾಗೂ ಅವರ ಪತ್ನಿ ಪಾರವ್ವಾ ಆರೇರ(73) ಸೋಮವಾರ (ಫೆ 17) ಬೆಳಗಿನ ಜಾವ ತಮ್ಮನಿವಾಸದಲ್ಲಿಯೆ ಇಹಲೋಕ ತ್ಯಜಿಸಿದ್ದಾರೆ.
ಈಶ್ವರ ಅರೇರಾ ಮತ್ತು ಪಾರವ್ವ ಅರೇರಾ ಎಂಬ ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ರಾತ್ರಿ ನಗುನಗುತ್ತ ಇದ್ದು, ಸೋಮವಾರ ಬೆಳಗಾಗುತ್ತಲೇ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು. ಮೃತರು ನಾಲ್ವರು ಪುತ್ರಿಯರು 12 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ದಂಪತಿಗಳು ಅಗಲಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಪಾರವ್ವ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರವಿವಾರ ರಾತ್ರಿ ಕೂಡ ಇಬ್ಬರು ಒಟ್ಟಿಗೆ ಊಟ ಮಾಡಿ ನಗು ನಗುತ್ತಲೇ ಇದ್ದವರು, ಬೆಳಕಾಗುವಷ್ಟರಲ್ಲಿಯೇ ಇಹ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾವಿನಲ್ಲಿ ಒಂದಾದ ದಂಪತಿಗಳನ್ನು ನೋಡಿ ದೇವರ ಹುಬ್ಬಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.