ಭಾರತ, ಏಪ್ರಿಲ್ 9 -- Karnataka 2nd PUC Exam 2 Time Table: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ನಿನ್ನೆ (ಏಪ್ರಿಲ್ 8) ಪ್ರಕಟವಾಗಿದ್ದು, ಅದರ ಬೆನ್ನಿಗೆ ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿ ಮತ್ತು ಪರೀಕ್ಷೆ ಮೂರರ ದಿನಾಂಕ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿಚಾರ ತಿಳಿಸಿದ್ದು, ಪರೀಕ್ಷೆ 1 ಬರೆದವರು ಪುನಃ ಪರೀಕ್ಷೆ ಬರೆದು ಫಲಿತಾಂಶ ಸುಧಾರಿಸಿಕೊಳ್ಳುವುದಿದ್ದರೆ ಅವರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾಗಿ ನ್ಯೂಸ್ಫಸ್ಟ್ ಕನ್ನಡ ವರದಿಮಾಡಿದೆ.
ಪರೀಕ್ಷೆ 1 ಬರೆದ ವಿದ್ಯಾರ್ಥಿಗಳು ಯಾವುದೇ ನಿರ್ದಿಷ್ಟ ವಿಷಯ ಅಥವಾ ಎಲ್ಲ ವಿಷಯಗಳ ಪರೀಕ್ಷೆಯನ್ನು ಪುನಃ ಬರೆಯಹಬುದು. ಇದಕ್ಕಾಗಿ ಮತ್ತೆ ಪರೀಕ್ಷಾ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದ ಪ್ರಕ್ರಿಯೆಗಳು ಮೊದಲಿನಂತೆಯೇ ಇರಲಿದೆ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾಗಿ ವರದಿ ಹೇಳಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 2 ಏಪ್ರಿಲ್ 24 ರಿಂದ ಮೇ 8ರ ತನಕ ನಡೆಯಲಿದೆ. ಇದರ ವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.