Bengaluru, ಮೇ 3 -- ಸ್ಯಾಂಡಲ್ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿದ ವಿದ್ಯಾಪತಿ ಸಿನಿಮಾ ಇದೀಗ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಮುನ್ಸೂಚನೆ ನೀಡದೆ, ನೇರವಾಗಿ ಇಂದಿನಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಏಪ್ರಿಲ್ 10ರಂದು ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟಿದ್ದ ʻವಿದ್ಯಾಪತಿʼ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಡಿಸೆಂಟ್ ಗಳಿಕೆ ಕಂಡಿತ್ತು.
ಹನಿಮೂನ್, ಇಕ್ಕಟ್, ಟಗರು ಪಲ್ಯ ಸಿನಿಮಾ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿರುವ ನಟ ನಾಗಭೂಷಣ್, ʻವಿದ್ಯಾಪತಿʼ ಚಿತ್ರರದ ಮೂಲಕ ಗಮನಸೆಳೆಯುವ ನಟನೆ ನೀಡಿದ್ದರು. ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದರೆ, ಗರುಡ ರಾಮ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದರು. ಡಾಲಿ ಧನಂಜಯ್ ಅನಕೊಂಡ ಅನ್ನೋ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಪಟ್ಟ ಪಡೆದ ತಮಿಳಿನ ʻಗುಡ್ ಬ್ಯಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.