ಭಾರತ, ಏಪ್ರಿಲ್ 5 -- Tumakuru: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯವರ ಮಹಾ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಮಹಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಉರಿಬಿಸಿಲನ್ನು ಲೆಕ್ಕಿಸದೆ ಅಸಂಖ್ಯಾತ ಭಕ್ತರು ಶ್ರೀಸ್ವಾಮಿಯವರ ತೇರು ಎಳೆದು ಪುನೀತರಾದರು. ಹರಕೆ ಹೊತ್ತ ಭಕ್ತರು ದವನ ಬಾಳೆ ಹಣ್ಣು, ಮೆಣಸು ಕಾಳನ್ನು ರಥಕ್ಕೆ ಎರಚಿ ಭಕ್ತಿ ಸಮರ್ಪಿಸಿದರು.
ಶಾಸಕ ಡಾ.ರಂಗನಾಥ್ ಷಟ್ಸ್ಥಲ ಧ್ವಜ ದೇವಾಲಯದಿಂದ ರಥದ ಬಳಿಗೆ ತಂದರು, ನಂತರ ಧ್ವಜದ ಹರಾಜು ನಡೆದು ಮೈಸೂರಿನ ಭಕ್ತರೊಬ್ಬರು ಆರು ಲಕ್ಷದ ಐವತ್ತೊಂದು ಸಾವಿರ ರೂ. ಗಳಿಗೆ ಹರಾಜು ಕೂಗಿದರು. ಶ್ರೀಗಳು ಗದ್ದುಗೆಯಲ್ಲಿ ಜೀವಂತ ಸಮಾಧಿಯಾದ ಅಭಿಜಿನ್ ಲಗ್ನದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾ ಸ್ವಾಮಿಗಳು, ಯಡಿಯೂರು ಬಾಳೆಹೊನ್ನುರು ಖಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧಿಶರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.