ಭಾರತ, ಮಾರ್ಚ್ 11 -- 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಪ್ರತಿಮ ಹೀರೋ ಆಗಿದ್ದಾರೆ ಕೆಎಲ್ ರಾಹುಲ್. ಅತ್ತ ಬ್ಯಾಟಿಂಗ್ ಜವಾಬ್ದಾರಿ, ಇತ್ತ ವಿಕೆಟ್ ಕೀಪರ್​​ ಆಗಿಯೂ ಗೆಲುವಿನಲ್ಲಿ ಅವರ ಪಾತ್ರ ಅದ್ಭುತವಾಗಿತ್ತು. ರಿಷಭ್ ಪಂತ್​ಗೂ ಮುನ್ನ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಒತ್ತಡದ್ದಲ್ಲಿದ್ದ ರಾಹುಲ್, ಸ್ಟಂಪ್​​ಗಳ ಹಿಂದೆ ನಿಂತು ನೀಡಿದ ಸ್ಥಿರ ಪ್ರದರ್ಶನ ಗಮನಾರ್ಹವಾಗಿತ್ತು. ಒತ್ತಡದಲ್ಲಿ ಬ್ಯಾಟ್​ನೊಂದಿಗೆ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗ, ಟ್ರೋಫಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಸ್ಪಿನ್ನರ್​​​ಗಳು ಬೌಲಿಂಗ್ ಮಾಡುವಾಗ ತಾನೆದುರಿಸಿದ ಕಷ್ಟವನ್ನು ವಿವರಿಸಿದ್ದಾರೆ.

ವಿಕೆಟ್ ಕೀಪರ್​ ಆಗಿ ಚೆಂಡನ್ನು ಚುರುಕಾಗಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಡಿಆರ್​ಎಸ್​ ನಿರ್ಧಾರಗಳಲ್ಲೂ ಅವರ ಪಾತ್ರ ದೊಡ್ಡದಿತ್ತು. ಭಾರತದ ನಾಲ್ವರು ಸ್ಪಿನ್ನರ್​​ಗಳಿಗೆ ವಿಕೆಟ್ ಕೀಪಿಂಗ್ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಪರಿಗಣಿಸಿದ್ದಾರೆ. ಭಾಗವಹಿಸಿದ ಎಲ್ಲಾ 8 ತಂಡಗಳಲ್ಲಿ ಭಾರತ ಮಾತ್ರ 5 ಸ್ಪಿನ್ನರ್ಸ...