ಭಾರತ, ಮೇ 7 -- ಡೆವಾಲ್ಡ್ ಬ್ರೇವಿಸ್ (52) ಬೆಂಕಿ ಬಿರುಗಾಳಿ ಬ್ಯಾಟಿಂಗ್ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎರಡು ವಿಕೆಟ್ಗಳ ಗೆಲುವು ದಾಖಲಿಸಿತು. ಇದು ಟೂರ್ನಿಯಲ್ಲಿ ಸಿಕ್ಕ 2ನೇ ಗೆಲುವು. ಮತ್ತೊಂದೆಡೆ ಈಗಾಗಲೇ ದುರ್ಬಲವಾಗಿದ್ದ ಹಾಲಿ ಚಾಂಪಿಯನ್ ಕೆಕೆಆರ್ ಪ್ಲೇಆಫ್ ಆಸೆಗೆ ಮಾರಕ ಹೊಡೆತ ನೀಡಿದೆ. ಹಾಗಂತ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲವಾದರೂ ಬಹುತೇಕ ಅಂತ್ಯ ಎನ್ನಬಹುದು.
ಎಂಎಸ್ ಧೋನಿ ನೇತೃತ್ವದ ಯೆಲ್ಲೋ ಆರ್ಮಿ, ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 9 ಸೋಲು, 3 ಗೆಲುವಿನೊಂದಿಗೆ 6 ಅಂಕಗಳೊಂದಿಗೆ ಕೊನೆಯ ಸ್ಥಾನ ಪಡೆದಿದೆ. ಮತ್ತೊಂದೆಡೆ, ಕೆಕೆಆರ್ ಇಷ್ಟೇ ಪಂದ್ಯಗಳನ್ನಾಡಿದ್ದು, 5 ಜಯ, 6 ಸೋಲು ಮತ್ತು 1 ಪಂದ್ಯ ರದ್ದಾಗುವುದರೊಂದಿಗೆ 11 ಅಂಕ ಗಳಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನ ಪಡೆದಿದೆ.
ಈ ಪಂದ್ಯದ ಸೋಲಿನೊಂದಿಗೆ ಕೆಕೆಆರ್ ಪ್ಲೇಆಫ್ ಅವಕಾಶಗಳು ಕುಸಿದವು. ಆದರೆ ಇನ್ನೂ ಅವಕಾಶ ಇದೆ. ಉಳಿದ ಎರಡೂ ಪಂದ್ಯಗಳಲ್ಲಿ ಜಯದ ನಗೆ ಬೀರಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.