ಭಾರತ, ಮಾರ್ಚ್ 12 -- ಇಂದಿಗೆ (ಮಾರ್ಚ್ 11, 2025) ಸರಿಯಾಗಿ ಎರಡು ವರ್ಷಗಳು, ಅಂದರೆ 2027ರ ಮಾರ್ಚ್ 11 ರಂದು ಟೆಸ್ಟ್ ಕ್ರಿಕೆಟ್​​ ಆರಂಭಗೊಂಡು 150 ವರ್ಷ ಪೂರ್ಣಗೊಳ್ಳಲಿದ್ದು, 150ನೇ ವಾರ್ಷಿಕೋತ್ಸವವನ್ನು ಮತ್ತಷ್ಟು ಸ್ಮರಣೀಯಗೊಳಿಸುವ ಸಲುವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ 2027ರ ಮಾರ್ಚ್ 11 ರಿಂದ 15 ರವರೆಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಪಿಂಕ್ ಬಾಲ್ ಚೆಂಡಿನೊಂದಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಪ್ರಕಟಿಸಿದೆ.

ಈ ಐತಿಹಾಸಿಕ ಪಂದ್ಯವು ಎಂಸಿಜಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ 1877 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಉಭಯ ತಂಡಗಳ ನಡುವಿನ 1977ರ ಶತಮಾನೋತ್ಸವ ಟೆಸ್ಟ್ ಪಂದ್ಯವೂ ಎಂಸಿಜಿಯಲ್ಲಿ ನಡೆದಿತ್ತು. ಈ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ 45 ರನ್​​​ಗಳಿಂದ ಗೆ...