Bengaluru, ಏಪ್ರಿಲ್ 13 -- Kannada Serial TRP: ಕನ್ನಡ ಕಿರುತೆರೆಯ ಧಾರಾವಾಹಿಗಳ 13ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಎಂದಿನಂತೆ ಮತ್ತೆ ನಂಬರ್‌ 1 ಪಟ್ಟಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಆದರೆ, ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮಾತ್ರ 13ನೇ ವಾರವೂ ನಂಬರ್‌ 1 ಸ್ಥಾನದಲ್ಲಿಯೇ ಮುಂದುವರಿದಿದೆ. 12ನೇ ವಾರವೂ ಮೊದಲ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ ಸದ್ಯ ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್‌ನಲ್ಲಿದೆ. ಇನ್ನುಳಿದಂತೆ ಟಾಪ್‌ 10 ಕನ್ನಡದ ಧಾರಾವಾಹಿಗಳು ಯಾವುವು? ಇಲ್ಲಿದೆ ಲಿಸ್ಟ್‌.

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ 12ನೇ ವಾರದಂತೆ, 13ನೇ ವಾರವೂ ನಂಬರ್‌ ಒನ್‌ ಸ್ಥಾನದಲ್ಲಿದೆ. ಈ ಧಾರಾವಾಹಿ 13ನೇ ವಾರ 8.2 ಟಿಆರ್‌ಪಿ ಪಡೆದು, ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಲಕ್ಷ್ಮೀ ನಿವಾಸ ಸೀರಿಯಲ್‌ ಕಳೆದ ಕೆಲ ವಾರ ಟಿಆರ್‌ಪಿಯಲ್ಲಿ ಕೊಂಚ ಹಿನ್ನೆಡೆ ಅನುಭವಿಸಿತ್ತು. ಇದೀಗ 13ನೇ ವಾರದಷ್ಟೊತ್ತಿಗೆ ಚೇತರಿಕೆ ಹಾದಿಯಲ್ಲಿ ಮುಂದುವರಿದಿದೆ. ಮೂರು, ನಾಲ್ಕನೇ ಸ...