Bengaluru, ಮೇ 2 -- ಕಿರುತೆರೆಯಲ್ಲಿ ಹೊಸ ಸೀರಿಯಲ್ಗಳ ಆಗಮನ ಆಗುತ್ತಿದ್ದಂತೆ, ಹಳೇ ಸೀರಿಯಲ್ಗಳು ಸೈಡ್ಗೆ ಸರಿಯುವುದು ಸಹಜ ಪ್ರಕ್ರಿಯೆ. ಆದರೆ, ಕೆಲವು ಹಳೇ ಧಾರಾವಾಹಿಗಳು, ಜಪ್ಪಯ್ಯ ಅಂದರೂ ಟಾಪ್ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಪ್ರಯೋಗ ಮಾಡಲು ಹೋಗಿ ಟಾಪ್ ಸೀರಿಯಲ್ಗಳು ಪ್ಲಾಪ್ ಆದ ಉದಾಹರಣೆಗಳೂ ಇವೆ. ಆ ಪೈಕಿ ಮೊದಲಿಗೆ ಕಣ್ಣಿಗೆ ಕಾಣಿಸುವುದು ಜೀ ಕನ್ನಡದ ಪುಟ್ಟಕ್ಕನ ಮಕ್ಕಳು. ಒಂದು ಕಾಲದಲ್ಲಿ ತಿಂಗಳುಗಟ್ಟಲೆ ಟಾಪ್ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ ಇದೀಗ, ಟಿಆರ್ಪಿಯಲ್ಲಿ 5.0 ನಂಬರ್ ದಾಟಿ ಮುಂದಡಿ ಇಡುತ್ತಿಲ್ಲ. ಇದಕ್ಕೆ ಕಾರಣ ಈ ಧಾರಾವಾಹಿ ಸಮಯ ಬದಲಾವಣೆ!
ಇದೊಂದೇ ಸೀರಿಯಲ್ ಅಲ್ಲ, ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಸೀರಿಯಲ್ ಮೊದಲೆಲ್ಲ ಒಳ್ಳೆಯ ಟಿಆರ್ಪಿ ಪಡೆದು ಟಾಪ್ ಮೂರರಲ್ಲಿ ಕಾಣಿಸಿದ್ದುಂಟು. ಆದರೆ, ಸದ್ಯದ ಸ್ಥಿತಿ ನೋಡಿದರೆ, ರಾಮಾಚಾರಿ ಸೀರಿಯಲ್ ಟಿಆರ್ಪಿಯಲ್ಲಿ ಕನಿಷ್ಠ ಹಂತ ತಲುಪಿದೆ. ಈ ಮೊದಲು ರಾಮಾಚಾರಿ ಸೀರಿಯಲ್ ರಾತ್ರಿ 9ಕ್ಕೆ ಪ್ರಸಾರವಾಗುತ್ತಿತ್ತು. ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.