ಭಾರತ, ಏಪ್ರಿಲ್ 25 -- ಇಂಡಿಯನ್ ಪ್ರೀಮಿಯರ್ ಲೀಗ್ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ಅಂತರದಿಂದ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆರ್​​ಸಿಬಿಗೆ ಎರಡು ಪಾಯಿಂಟ್ ಬರಲು ಟರ್ನಿಂಗ್ ಪಾಯಿಂಟ್ ಮಾಡಿದ್ದೇ ವಿಕೆಟ್ ಕೀಪರ್ ಜಿತೇಶ್ ಶರ್ಮಾ. 4 ವಿಕೆಟ್ ಉರುಳಿಸಿ ಪಂದ್ಯದ ಚಿತ್ರಣ ಬದಲಿಸಿ ಗೆಲುವು ತಂದುಕೊಟ್ಟ ಜೋಶ್ ಹೇಜಲ್​ವುಡ್ ಪಂದ್ಯಶ್ರೇಷ್ಠ ಪಡೆದರಾದರೂ ನಿಜವಾದ ಗೆಲುವಿನ ರೂವಾರಿ ಜಿತೇಶ್ ಶರ್ಮಾ ಅಂದರೆ ತಪ್ಪಾಗಲ್ಲ!

ಪಂದ್ಯದಲ್ಲಿ ಆ ಒಂದು ನಿರ್ಧಾರದಿಂದ ಸೋಲು-ಗೆಲುವಿನ ಭವಿಷ್ಯವೇ ನಿರ್ಧಾರವಾಯಿತು. ರಾಜಸ್ಥಾನ್ ರಾಯಲ್ಸ್ ಗೆಲ್ಲಲು ಮೂರು ಓವರ್​​ಗಳಲ್ಲಿ 40 ರನ್ ಬೇಕಿತ್ತು. 18ನೇ ಓವರ್​​​ನಲ್ಲಿ ಭುವನೇಶ್ವರ್​ ಕುಮಾರ್​ ಬೌಲಿಂಗ್​​ನಲ್ಲಿ ಬರೋಬ್ಬರಿ 22 ರನ್ ಗಳಿಸಿದ ಆರ್​ಆರ್​​, ಕೊನೆಯ 2 ಓವರ್​​ಗಳಲ್ಲಿ ಕೇವಲ 18 ರನ್ ಬೇಕಿತ್ತು. ಅಬ್ಬರಿಸುತ್ತಿದ್ದ ಧ್ರುವ್ ಜುರೆಲ್ ಅಸಾಧಾರಣ ಆಟದ ಮೂಲಕ ಪಂದ್ಯವನ್ನು ಗೆಲ್ಲಿಸಲು ಯತ್ನಿಸುತ್ತಿದ್ದರು. ಆಗ 1...