ಭಾರತ, ಏಪ್ರಿಲ್ 17 -- ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್- 2 ಸಖತ್ ಮನರಂಜನೆ ನೀಡುವ ಮೂಲಕ ಪ್ರತಿ ಶನಿವಾರ ಹಾಗೂ ಭಾನುವಾರ ವೀಕ್ಷಕರನ್ನು ರಂಜಿಸುತ್ತಿದೆ. ಇದರಲ್ಲಿರುವ ಜೋಡಿಗಳು ಕೂಡ ಅದ್ಭುತ ಪರ್ಫಾಮೆನ್ಸ್ ನೀಡುವ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

ಗಗನಾ-ಪ್ರತಾಪ್‌, ಸೂರ್ಯ-ಅಭಿಜ್ಞಾ, ರಮೊಲಾ-ರಕ್ಷಕ್, ಪ್ರೇಮ್‌ ತಾಪ-ವಿಜಯಲಕ್ಷ್ಮೀ, ಸುನಿಲ್-ಅಮ್ರಿಟಾ ಹೀಗೆ ಹಲವು ಜೋಡಿಗಳಿದ್ದು, ಒಬ್ಬರಿಗಿಂತ ಒಬ್ಬರು ಚೆನ್ನಾಗಿ ತಮಗೆ ನೀಡಿರುವ ಟಾಸ್ಕ್‌ ನಿಭಾಯಿಸಿ, ಮನರಂಜಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ, ಮಾತ್ರವಲ್ಲ ತೀರ್ಪುಗಾರರದಿಂದಲೂ ಮೆಚ್ಚುಗೆ ಗಳಿಸುತ್ತಿದ್ದಾರೆ.

ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಜೋಡಿಯೊಂದು ಸಖತ್ ಟ್ರೆಂಡಿಂಗ್‌ನಲ್ಲಿದೆ. ಅಲ್ಲದೇ ಈ ಸೀಸನ್‌ನಲ್ಲಿ ಇವರೇ ಗೆಲ್ಲೋದು ಅಂತ ಜೀ ವೀಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ. ಅಂದ ಹಾಗೆ ಇವರಿಬ್ಬರು ಜೀ ಕನ್ನಡದಲ್ಲಿ ಈ ಹಿಂದೆ ಪ್ರಸಾರವಾದ ಬೇರೆ ಬೇರೆ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದವರು.

ಹೌ...