Bengaluru, ಮೇ 4 -- ಬೆಂಗಳೂರು: ಜೀವನದಿ ಕಾವೇರಿ ಹೆಸರಿನಲ್ಲಿ ಕಾವೇರಿ ನದಿ ಮತ್ತು ರಾಜ್ಯದ ಸುಂದರ ಪ್ರಕೃತಿ ತಾಣ, ಅರಣ್ಯ ಸಂಪತ್ತಿನ ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿಯ ಮೊಟ್ಟ ಮೊದಲ ಪ್ರದರ್ಶನವನ್ನು ಚಾಮರಾಜನಗರದಲ್ಲಿ 5 ನೇ ಮೇ, 2025ರ ಸೋಮವಾರದಂದು ಆಯೋಜಿಸಲಾಗಿದೆ. ಈ ಸಾಕ್ಷ್ಯಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರಾದ ಸಂಜಯ್ ಗುಬ್ಬಿಯವರು ಸಾಕ್ಷ್ಯ ಚಿತ್ರದ ಟ್ರೇಲರ್ ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ, ಇವನಾಸೆನ್ಸ್ ಸ್ಟುಡಿಯೋಸ್ ಮತ್ತು ಹೊಳೆಮತ್ತಿ ನೇಚರ್ ಫೌಂಡೇಶನ್ ಇವರು ಜೀವನದಿ ಕಾವೇರಿ ಎಂಬ ಸಾಕ್ಷ್ಯಚಿತ್ರವನ್ನು ಹೊರತಂದಿದ್ದು ದಿನಾಂಕ 05 ನೇ ಮೇ, 2025 ಸೋಮವಾರದಂದು ಚಾಮರಾಜನಗರದ ಸಿಂಹ ಥಿಯೇಟರ್ನಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತಿದೆ. ಈ ಸುಂದರ ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನಕ್ಕೆ ತಮ್ಮನ್ನು ಸಹೃದಯದಿಂದ ಆಹ್ವಾನಿಸುತ್ತೇವೆ ಎಂದು ಸಂಜಯ್ ಗುಬ್ಬಿ ತಿಳಿಸಿದ್ದಾರೆ.
ಜೀವನದಿ ಕಾವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.