ಭಾರತ, ಮೇ 26 -- ವಿದೇಶಿ ಶಿಕ್ಷಣದ ವ್ಯಾಮೋಹ ಹೆಚ್ಚಾಗಿದೆ. ತಮಗೆ ನೆಚ್ಚಿನ ದೇಶಗಳತ್ತ ವೃತ್ತಿಪರ ಕೋರ್ಸ್ಗಳ ಅಧ್ಯಯನಕ್ಕೆ ಭಾರತೀಯ ವಿದ್ಯಾರ್ಥಿಗಳು ದೌಡಾಯಿಸುತ್ತಿರುವ ಸಂಖ್ಯೆ ದುಪ್ಪಟ್ಟಾಗಿದೆ. ಮತ್ತೊಂದೆಡೆ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ ಆಯಾ ದೇಶಗಳ ವಿಶ್ವವಿದ್ಯಾಲಯಗಳು ವಿವಿಧ ಆಫರ್ಗಳನ್ನೂ ನೀಡುತ್ತಿವೆ. ಈ ಪಟ್ಟಿಗೆ ಜರ್ಮನಿಯ ಸಾರ್ವಜನಿಕ ವಿಶ್ವವಿದ್ಯಾಲಯಗಳೂ ಸೇರಿವೆ.
ಜರ್ಮನಿಯು ತನ್ನ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೂಲಕ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ (ಬೋಧನಾ-ಮುಕ್ತ ಶಿಕ್ಷಣ) ಅನ್ನು ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಫ್ರೀ ಟ್ಯೂಷನ್ ನೀಡುವ ವಿಶ್ವವಿದ್ಯಾಲಯಗಳಿಗೆ ವಿವಿಧ ಪದವಿ ಪೂರ್ವ-ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. 2014ರಲ್ಲೇ ಜರ್ಮನಿಯ 16 ರಾಜ್ಯಗಳು ಟ್ಯೂಷನ್ ಫೀಸ್ ರದ್ದುಗೊಳಿಸಿದವು. ಅಂದಿನಿಂದ ಇದು ಜಾರಿಯಲ್ಲಿದೆ.
ಟ್ಯೂಷನ್ ಫೀಸ್ ಉಚಿತವಾಗಿದ್ದರೂ ವಿದ್ಯಾರ್ಥಿಗಳು 150 ಯುರೋಗಳಿಂದ (ಸುಮಾರು 14,500) 350 ಯುರೋಗಳವರೆಗೆ (ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.