ಭಾರತ, ಏಪ್ರಿಲ್ 29 -- ಬಾಲಿವುಡ್ ನಟ ಶಾರುಖ್‌ ಖಾನ್ ಗ್ಲೋಬಲ್‌ ಸ್ಟಾರ್‌. ಅವರು ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಶಾರುಖ್ ಭೇಟಿ ಮಾಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಇತ್ತೀಚೆಗೆ ಜರ್ಮನಿಯಲ್ಲಿ ಶಾರುಖ್‌ ಅವರನ್ನು ಭೇಟಿ ಮಾಡಿರುವ ಅಭಿಮಾನಿಯೊಬ್ಬರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಶಾರುಖ್‌ ಖಾನ್‌ ನೋಡಿ ಆಕೆ ಅತ್ತಿದ್ದೇಕೆ ಎಂಬುದನ್ನು ನೋಡಿ.

ಎಸ್‌ಆರ್‌ಕೆ ಫ್ಯಾನ್ ಕ್ಲಬ್‌ ಪುಟದಲ್ಲಿ ಈ ವಿಡಿಯೊವನ್ನು ಶೇರ್ ಮಾಡಲಾಗಿದೆ. ಶಾರುಖ್ ಇತ್ತೀಚೆಗೆ ಜರ್ಮನಿಗೆ ಭೇಟಿ ನೀಡಿದ್ದ ಸಂದರ್ಭ ನಡೆದ ಘಟನೆಯಿದು. ಶಾರುಖ್ ತನ್ನ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಹೋಟೆಲ್‌ ಒಂದರಿಂದ ಹೊರಗಡೆ ಬರುತ್ತಿರುತ್ತಾರೆ. ಆಗ ಒಂದಿಷ್ಟು ಮುಂದೆ ಅಭಿಮಾನಿಗಳು ಅವರನ್ನು ನೋಡುತ್ತಾರೆ. ಈ ಬಗ್ಗೆ ಆಕೆ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. 'ಸ್ನೇಹಿತರೇ ಈಗಷ್ಟೇ ಏನು ನಡೆಯಿತು ಎಂಬುದನ್ನು ನೀವೂ ಊಹಿಸಲೂ ಸಾಧ್ಯವಿಲ...