ಭಾರತ, ಮೇ 9 -- ಭಾರತದ ಸೇನಾಬಲವನ್ನು ಕಂಡು ಪಾಕಿಸ್ತಾನ ರೆಕ್ಕೆಯಿಲ್ಲದ ಹಕ್ಕಿಯಂತಾಗಿದ್ದು ಪಕ್ಕಾ. ಉಗ್ರರ ನೆಲೆಯನ್ನು ಗುರಿಯಾಗಿಸಿ ಭಾರತ ನಡೆಸಿದ ನಿಖರ ದಾಳಿಗೆ ಪ್ರತಿಯಾಗಿ, ಭಾರತದ ಸೇನೆ ಹಾಗೂ ನಾಗರಕರ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿದೆ. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಪಾಕಿಸ್ತಾನದಿಂದ ಸಾಧ್ಯವಾಗಿಲ್ಲ. ಹೀಗಾಗಿ ಪಾಕಿಸ್ತಾನವು ಕಳ್ಳದಾರಿ ಹಿಡಿಯುತ್ತದೆ. ತನ್ನದೇ ದೇಶದ ಜನರ ಜೀವದ ವಿಷಯವಾಗಿ ಚೆಲ್ಲಾಟವಾಡುತ್ತಿದೆ. ಗುರುವಾರ (ಮೇ 8) ರಾತ್ರಿ ಭಾರತದ ಅನೇಕ ನಗರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಸಮಯದಲ್ಲಿಯೂ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ತೆರೆದಿಡುವ ಮೂಲಕ ಜನರ ಜೀವದ ವಿಷಯದಲ್ಲಿ ಚೆಲ್ಲಾಟವಾಡಿದೆ ಎಂದು ಭಾರತ ಆರೋಪಿಸಿದೆ.
ಇಂದು (ಮೇ 9) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಪಾಕಿಸ್ತಾನವು ಮೇ 7ರಂದು ರಾತ್ರಿ 8.30ಕ್ಕೆ ಅಪ್ರಚೋದಿತ ವೈಮಾನಿಕ ದಾಳಿಯನ್ನು ನಡೆಸಿತು. ಹಲವಾರು ಡ್ರೋನ್ಗಳು ಮತ್ತು ಕ್ಷಿಪಣಿಗಳಿಂದ ಭ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.