ಡೆಲ್ಲಿ, ಮೇ 20 -- ಐಪಿಎಲ್ 2025ರ ಆವೃತ್ತಿಯ 62ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ (CSK vs RR) ತಂಡವನ್ನು ಎದುರಿಸಲಿದೆ. ಇದು ಪ್ರಸಕ್ತ ಋತುವಿನಲ್ಲಿ ಮೊದಲನೇ ಬಾರಿಗೆ ತಟಸ್ಥ ಸ್ಥಳದಲ್ಲಿ ನಡೆಯುತ್ತಿರುವ ಪಂದ್ಯವಾಗಿದೆ. ಮೇ 20ರ ಮಂಗಳವಾರ ನಡೆಯುವ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಎರಡೂ ತಂಡಗಳು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಯಲ್ಲಿ ಅಭಿಮಾನಿಗಳಿಗೆ ಸಿಹಿ ಉಣಿಸುವ ಲೆಕ್ಕಾಚಾರದಲ್ಲಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಹವಾಮಾನ ವರದಿ ಮತ್ತು ಪಿಚ್ ವರದಿಯನ್ನು ನೋಡೋಣ.
ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಈ ವರ್ಷ ಬೌಲರ್ಗಳಿಗೆ ತುಸು ನೆರವಾಗಿದೆ. ವಿಶೇಷವಾಗಿ ಸ್ಪಿನ್ನರ್ಗಳು ತಿರುವು ಮತ್ತು ಸ್ವಲ್ಪ ಕಡಿಮೆ ಬೌನ್ಸ್ ಅನ್ನು ಕಂಡುಕೊಂಡಿದ್ದಾರೆ. ಆದರೂ ಇಲ್ಲಿ ರನ್ ಮಳೆ ನಿರೀಕ್ಷಿಸಬಹುದು. ಭಾನುವಾರ ಇಲ್ಲಿ ನಡೆದ ಕೊನೆಯ ಐಪಿಎಲ್ ಪಂದ್ಯದಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.