Bengaluru, ಫೆಬ್ರವರಿ 5 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಜಾಹ್ನವಿಗೆ ಜಯಂತ್ ಮನೆಯಲ್ಲಿ ಸಿಸಿಟಿವಿ ಇರಿಸಿರುವುದು ಗಮನಕ್ಕೆ ಬಂದಿದೆ. ಆದರೆ ಜಯಂತ್ ಈ ಬಗ್ಗೆ ಜಾಹ್ನವಿಗೆ ಏನೂ ಹೇಳಿಲ್ಲ. ಅಲ್ಲದೆ, ಜಯಂತ್ ನಡವಳಿಕೆ ಅವಳಿಗೆ ಮತ್ತಷ್ಟು ಹೆದರಿಕೆ ತಂದಿದೆ. ಹೀಗಾಗಿ ಮನೆಯಲ್ಲಿ ಈ ವಿಚಾರ ಹೇಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ ಹಾಗೆ ಹೇಳಿದರೆ ಜಯಂತ್ ಮನೆಗೆ ಹೋಗಲು ಬಿಡುವುದಿಲ್ಲ, ಅಲ್ಲದೇ ಮನೆಗೆ ಫೋನ್ ಮಾಡಿ ಹೇಳುವ ಹಾಗೂ ಇಲ್ಲ. ಅದಕ್ಕಾಗಿ ನೇರವಾಗಿ ಮನೆಗೆ ಹೋಗಿ, ಅವರಲ್ಲೇ ಈ ವಿಚಾರ ತಿಳಿಸುವುದು ಉತ್ತಮ ಎಂದು ನಿರ್ಧರಿಸುತ್ತಾಳೆ. ಜಯಂತ್‌ ಆಫೀಸ್‌ಗೆ ಹೊರಡುತ್ತಲೇ, ಜಾಹ್ನವಿ ಅಜ್ಜಿಯನ್ನು ನೋಡಿಕೊಳ್ಳುವ ನರ್ಸ್ ಬಳಿ ಹೇಳಿ, ಮೆಲ್ಲನೆ ಮನೆಯಿಂದ ಹೊರಗಡೆ ಹೋಗುತ್ತಾಳೆ. ಜಯಂತ್ ಈ ವಿಚಾರವನ್ನು ಸಿಸಿಟಿವಿಯಲ್ಲಿ ನೋಡುತ್ತಾನೆ. ಆದರೆ, ಜಾಹ್ನವಿ ಏನಾದರೂ ತರುವುದಕ್ಕೆ ಮಾರ್ಕೆಟ್‌ಗೆ ಹೋಗಿರಬಹುದು ಎಂದುಕೊಳ್ಳುತ್ತಾನೆ. ಈಗ ಕೇಳಬಾರದು ಎ...