Bengaluru, ಮೇ 3 -- ಕಾಲಿವುಡ್ ಸ್ಟಾರ್ ಹೀರೋ ತಲಾ ಅಜಿತ್ ಕುಮಾರ್ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಒಟಿಟಿ ಕಡೆ ಮುಖ ಮಾಡುತ್ತಿವೆ. ಫೆಬ್ರವರಿಯಲ್ಲಿ ʻವಿದಾಮುಯರ್ಚಿʼ ಚಿತ್ರದ ಮೂಲಕ ಆಗಮಿಸಿದ್ದ ಅಜಿತ್, ಕಳೆದ ತಿಂಗಳಷ್ಟೇ ʻಗುಡ್ ಬ್ಯಾಡ್ ಅಗ್ಲಿʼ ಚಿತ್ರದೊಂದಿಗೆ ಮತ್ತೆ ಚಿತ್ರಮಂದಿರಗಳಿಗೆ ಬಂದಿದ್ದರು. ಈಗ ಇದೇ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿದೆ.
ಏಪ್ರಿಲ್ 10ರಂದು ತೆರೆಕಂಡಿದ್ದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದರೆ, ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಸುನಿಲ್, ರಾಹುಲ್ ದೇವ್, ಯೋಗಿ ಬಾಬು, ಪ್ರಿಯಾ ಪ್ರಕಾಶ್ ವಾರಿಯರ್, ಟಾಮ್ ಚಾಕೊ ಸೇರಿ ಇನ್ನೂ ಹಲವರು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿದ್ದರು.
ʻಗುಡ್ ಬ್ಯಾಡ್ ಅಗ್ಲಿʼ ಚಿತ್ರವನ್ನು ಟಾಲಿವುಡ್ನ ಅತಿದೊಡ್ಡ ನಿರ್ಮಾಣ ಕಂಪನಿ ಮೈತ್ರಿ ಮೂವಿ ಮೇಕರ್ಸ್ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಕಾಲಿವುಡ್ ನಟ ಅಜಿತ್ ಅವರ ಈ ಹಿಂದಿನ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.