ಭಾರತ, ಏಪ್ರಿಲ್ 27 -- ಮುಂಬೈ ಕ್ರಿಕೆಟರ್​ ಆಯುಷ್ ಮಾತ್ರೆ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಏಪ್ರಿಲ್ 20ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತಾನು ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಆಯುಷ್ ಮಾತ್ರೆ, 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32 ರನ್ ಸಿಡಿಸಿ ತನ್ನ ಆಗಮನದ ಸೂಚನೆ ಕೊಟ್ಟರು. ನಿರ್ಭೀತಿಯಿಂದ ಬ್ಯಾಟ್ ಬೀಸಿದ ಅವರು ತನ್ನ ಪ್ರತಿಭೆ ಎಂತಹದ್ದೆಂದು ತೋರಿಸಿದರು. ಇದೀಗ ಮುಂಬೈ ಅಂಡರ್​-19 ಕೋಚ್ ದಿನೇಶ್ ಲಾಡ್, ಆಯುಷ್ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ತನ್ನ ಶಿಷ್ಯನ ರೋಚಕ ಜರ್ನಿಯ ಕುರಿತು ಮಾತನಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.

ರೋಹಿತ್ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ಬಾಲ್ಯದ ತರಬೇತುದಾರ ಹಾಗೂ ಮುಂಬೈ ಅಂಡರ್-19 ಕ್ರಿಕೆಟ್ ತಂಡದ ಪ್ರಸ್ತುತ ಕೋಚ್ ದಿನೇಶ್ ಲಾಡ್, ಸಿಎಸ್‌ಕೆ ಬ್ಯಾಟ್ಸ್‌ಮನ್ ಅವರ ನಿರ್ಭೀತತೆಯನ್ನು ಶ್ಲಾಘಿಸಿದ್ದಾರ...