Bengaluru, ಮೇ 9 -- ಚಂದನ್ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಚಿರಪರಿಚಿತ. ಈಗ ಇದೇ ಮೊದಲ ಬಾರಿಗೆ ಅವರು ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ 'ಸೂತ್ರಧಾರಿ' ಚಿತ್ರದ ಮೂಲಕ ಪರಿಚಿತರಾಗುತ್ತಿದ್ದಾರೆ. ಹೆಸರು ಕೇಳುತ್ತಿದ್ದಂತೆಯೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಸ್ಪಷ್ಟವಾಗುತ್ತದೆ. ಇಷ್ಟಕ್ಕೂ ಈ 'ಸೂತ್ರಧಾರಿ'ಯೇನು? ನೀವೇ ಓದಿ.
ಒಂದಿಷ್ಟು ಜನ ನಿಗೂಢವಾಗಿ ಕಿಡ್ನಾಪ್ ಆಗುತ್ತಿರುತ್ತಾರೆ. ಒಂದೆರಡು ದಿನಗಳ ನಂತರ ವಾಪಸ್ಸಾಗುವ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಇಂಥದ್ದೊಂದು ನಿಗೂಢ ಮತ್ತು ರೋಚಕ ಪ್ರಕರಣವನ್ನು ಇನ್ಸ್ಪೆಕ್ಟರ್ ವಿಜಯ್ಗೆ (ಚಂದನ್ ಶೆಟ್ಟಿ) ವಹಿಸಲಾಗುತ್ತದೆ. ಪ್ರಕರಣ ತನಿಖೆ ಮಾಡುತ್ತಿದ್ದಂತೆ ಒಂದಿಷ್ಟು ಜನರನ್ನು ವಿಜಯ್ ನೇತೃತ್ವದ ತಂಡ ಸೆರೆಹಿಡಿಯುತ್ತದೆ. ಆದರೆ, ಅವರೆಲ್ಲರೂ ಬರೀ ಪಾತ್ರಧಾರಿಗಳು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ, ಈ ಪಾತ್ರಧಾರಿಗಳ ಹಿಂದಿನ 'ಸೂತ್ರಧಾರಿ' ಯಾರು? ಆತ ಯಾಕೆ ಕಿಡ್ನಾಪ್ ಮಾಡುತ್ತಿರುತ್ತಾನೆ? ಕಿಡ್ನಾಪ್ ಆಗಿ ಬಂದವರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.