ಭಾರತ, ಮೇ 27 -- ಐಪಿಎಲ್ 2025ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಟೂರ್ನಿಯಲ್ಲಿ ಇದೇ ಮೊದಲ ಹಾಗೂ ಕೊನೆಯ ಬಾರಿಗೆ ಎದುರಿಸಲಿದೆ. ಲಕ್ನೋದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತಿದ್ದರೂ, ಆರ್ಸಿಬಿ ತಂಡಕ್ಕೆ ಅಗ್ರ 2 ಸ್ಥಾನಗಳಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ ಪಂದ್ಯದಲ್ಲಿ ಆಡುವ ಆಸೆ ಜೀವಂತವಾಗಿದೆ. ಇದಕ್ಕೆ ಬೇರೆ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿಲ್ಲ. ಈಗಾಗಲೇ ಪಂಜಾಬ್ ಕಿಂಗ್ಸ್ (PBKS) ತಂಡವು ಮುಂಬೈ ಇಂಡಿಯನ್ಸ್ (MI) ಮಣಿಸಿ ಮೊದಲ ತಂಡವಾಗಿ ಕ್ವಾಲಿಫೈಯರ್ ಪ್ರವೇಶ ಪಡೆದಿದ್ದು, ಇದೀಗ ಲಕ್ನೋ ವಿರುದ್ಧ ಗೆದ್ದರೆ ಆರ್ಸಿಬಿ ತಂಡ ಅದರ ಎದುರಾಳಿಯಾಗಲಿದೆ.
ಇದನ್ನೂ ಓದಿ | ಆರ್ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಕನಸಿಗೆ ಆನೆಬಲ; ಪ್ಲೇಆಫ್ಗೂ ಮುನ್ನ ತಂಡ ಸೇರಿಕೊಂಡ ಜೋಶ್ ಹೇಜಲ್ವುಡ್
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.