ಭಾರತ, ಮಾರ್ಚ್ 25 -- ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್ ನೂತನ ನಾಯಕನ ಅಡಿಯಲ್ಲಿ 11 ರನ್ಗಳ ಭರ್ಜರಿ ಗೆಲುವಿನೊಂದಿಗೆ 18ನೇ ಆವೃತ್ತಿಯ ಅಭಿಯಾನ ಆರಂಭಿಸಿತು. ನಾಯಕ ಶ್ರೇಯಸ್ ಅಯ್ಯರ್ (97*) ಮತ್ತು ಶಶಾಂಕ್ ಸಿಂಗ್ (44*) ಅವರ ಬ್ಯಾಟಿಂಗ್ ಸಾಹಸದಿಂದ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಪಂಜಾಬ್ ಶುಭಾರಂಭ ಕಂಡಿದೆ. ಆದರೆ ಸಾಯಿ ಸುದರ್ಶನ್, ಜೋಸ್ ಬಟ್ಲರ್ ಮತ್ತು ಶೆರ್ಫಾನೆ ರುದರ್ಫೋರ್ಡ್ ಅವರ ಹೋರಾಟದ ನಡುವೆಯೂ ಗುಜರಾತ್ ಗೆಲುವಿನ ಅಂಚಿನಲ್ಲಿ ಶರಣಾಯಿತು. ಇದರಿಂದ ಅಂಕಪಟ್ಟಿಯಲ್ಲಿ 8 ನೇ ಸ್ಥಾನ ಪಡೆದಿದೆ. ಗೆದ್ದ ಅಯ್ಯರ್ ಪಡೆ 3ನೇ ಸ್ಥಾನ ಗಳಿಸಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಬೃಹತ್ ಮೊತ್ತ ಪೇರಿಸಿತು. ಶ್ರೇಯಸ್ ಅಯ್ಯರ್ (97*), ಪ್ರಿಯಾಂಶ್ ಆರ್ಯ (47) ಮತ್ತು ಶಶಾಂಕ್ ಸಿಂಗ್ (44*) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಪಿಬಿಕೆಎಸ್ ತನ್ನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.