ಭಾರತ, ಮಾರ್ಚ್ 25 -- ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್​​ ನೂತನ ನಾಯಕನ ಅಡಿಯಲ್ಲಿ 11 ರನ್​​​ಗಳ ಭರ್ಜರಿ ಗೆಲುವಿನೊಂದಿಗೆ 18ನೇ ಆವೃತ್ತಿಯ ಅಭಿಯಾನ ಆರಂಭಿಸಿತು. ನಾಯಕ ಶ್ರೇಯಸ್ ಅಯ್ಯರ್ (97*)​ ಮತ್ತು ಶಶಾಂಕ್ ಸಿಂಗ್ (44*) ಅವರ ಬ್ಯಾಟಿಂಗ್ ಸಾಹಸದಿಂದ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಪಂಜಾಬ್ ಶುಭಾರಂಭ ಕಂಡಿದೆ.​ ಆದರೆ ಸಾಯಿ ಸುದರ್ಶನ್, ಜೋಸ್ ಬಟ್ಲರ್ ಮತ್ತು ಶೆರ್ಫಾನೆ ರುದರ್​ಫೋರ್ಡ್​ ಅವರ ಹೋರಾಟದ ನಡುವೆಯೂ ಗುಜರಾತ್ ಗೆಲುವಿನ ಅಂಚಿನಲ್ಲಿ ಶರಣಾಯಿತು. ಇದರಿಂದ ಅಂಕಪಟ್ಟಿಯಲ್ಲಿ 8 ನೇ ಸ್ಥಾನ ಪಡೆದಿದೆ. ಗೆದ್ದ ಅಯ್ಯರ್​ ಪಡೆ 3ನೇ ಸ್ಥಾನ ಗಳಿಸಿದೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 5ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಬೃಹತ್ ಮೊತ್ತ ಪೇರಿಸಿತು. ಶ್ರೇಯಸ್ ಅಯ್ಯರ್ (97*), ಪ್ರಿಯಾಂಶ್ ಆರ್ಯ (47) ಮತ್ತು ಶಶಾಂಕ್ ಸಿಂಗ್ (44*) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಪಿಬಿಕೆಎಸ್ ತನ್ನ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243...