ಭಾರತ, ಮೇ 26 -- ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಮರುಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಒಂದೆಡೆ ಮಳೆಯ ಆತಂಕವಿದ್ದರೆ, ಮತ್ತೊಂದೆಡೆ ಕೋವಿಡ್ 19 ಮಹಾಮಾರಿ ಹರಡುತ್ತಿರುವ ಆತಂಕ ಕೂಡಾ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಲ್ಲಿ ಹೆಚ್ಚಾಗಿದೆ. ಈ ನಡುವೆ ಕರ್ನಾಟಕ ಅಸೋಸಿಯೇಟೆಡ್ ಸ್ಕೂಲ್ಸ್ ಮ್ಯಾನೇಜ್ಮೆಂಟ್ಸ್ (KAMS) ಸಲಹೆ ಸೂಚನೆಗಳ ಹೊಸ ಸುತ್ತೋಲೆ ಹೊರಡಿಸಿದೆ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಕೋವಿಡ್ -19 ರೂಪಾಂತರ ಮತ್ತು ಇತರ ವೈರಲ್ ಸೋಂಕುಗಳ ಬಗ್ಗೆ ಜಾಗರೂಕರಾಗಿರಲು ತಿಳಿಸಿದೆ.
ರಾಜ್ಯದಲ್ಲಿ ಭಾನುವಾರ (ಮೇ 25) 9 ಕೋವಿಡ್ ಕೇಸ್ಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 100ರ ಸಮೀಪ ಬಂದಿದೆ. ಇದರ ನಡುವೆ ಶನಿವಾರ ನಗರದಲ್ಲಿ ಕೋವಿಡ್ -19 ಕಾರಣದಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಸಂಘವು ಹೊಸ ಎಸ್ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಬಿಡುಗಡೆ ಮಾಡಿದೆ.
ಕೋವಿಡ್ ವಿಷಯದಲ್ಲಿ ಭಯಪಡುವ ಅಗತ್ಯವಿಲ್ಲ. ಆದರೂ ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.