Bengaluru, ಮಾರ್ಚ್ 30 -- ಯುಗಾದಿ ಹಬ್ಬದ ಪ್ರಯುಕ್ತ ಭಾವಿ ಪತಿಯ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಟಿ ಅಭಿನಯಾ.
2011ರಲ್ಲಿ ಪುನೀತ್ ರಾಜ್ಕುಮಾರ್ ಅವರ ಜೊತೆಗೆ ಹುಡುಗರು ಸಿನಿಮಾದಲ್ಲಿ ನಟಿಸಿ. ಆ ಚಿತ್ರದಲ್ಲಿ ಅಪ್ಪು ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಸೂಪರ್ ಹಿಟ್ ಸಹ ಆಗಿತ್ತು. ಹೀಗಿರುವಾಗಲೇ ಇದೇ ಬಹುಭಾಷಾ ನಟಿ ಅಭಿನಯಾ, ಕೆಲ ವಾರಗಳ ಹಿಂದಷ್ಟೇ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಸದ್ದಿಲ್ಲದೆ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.
ಅಭಿನಯ ಚೆಂದದ ನಟಿ. ಹುಟ್ಟಿನಿಂದಲೇ ಮಾತು ಮತ್ತು ಶ್ರವಣ ದೋಷದಿಂದ ಬಳಲುತ್ತಿದ್ದರೂ, ಗುರಿಗಳನ್ನು ಸಾಧಿಸಲು ಅಂಗವೈಕಲ್ಯ ಅಡ್ಡಿಯಲ್ಲ ಎಂದು ಸಾಬೀತುಪಡಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
2008ರಲ್ಲಿ ತೆಲುಗಿನ ನೇನೆಂತೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಅಭಿನಯ, ಅದಾದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ಹುಡುಗರು, ಕಿಚ್ಚು, ಆಟೋ ರಾಮಣ್ಣ ಸಿನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.