ಭಾರತ, ಮಾರ್ಚ್ 11 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್​ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದ ಪತಿ ಕೆಎಲ್ ರಾಹುಲ್ (KL Rahul) ಅವರನ್ನು ಹುರಿದುಂಬಿಸುತ್ತಾ ಪತ್ನಿ ಅಥಿಯಾ ಶೆಟ್ಟಿ (Athiya Shetty) ವಿಶೇಷ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಮೊದಲ ಮಗುವಿನ ನಿರೀಕ್ಷಿಸುತ್ತಿರುವ ಸುನಿಲ್ ಶೆಟ್ಟಿ ಪುತ್ರಿ ತನ್ನ ಬೇಬಿ ಬಂಪ್​ನೊಂದಿಗೆ ತನ್ನ ಚಿತ್ರ ಹಂಚಿಕೊಂಡಿದ್ದಾರೆ. ರಾಹುಲ್ ಅವರನ್ನು ಟ್ಯಾಗ್ ಮಾಡಿ ಹೃದಯದ ಎಮೋಜಿಯನ್ನು ಸೇರಿಸಿದ್ದಾರೆ.

ಭಾನುವಾರ (ಮಾ 9) ದುಬೈನಲ್ಲಿ ನಡೆದ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅದ್ಭುತ ಗೆಲುವು ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅಥಿಯಾ ತನ್ನ ಇನ್​ಸ್ಟಾಗ್ರಾಂ ಸ್ಟೋರಿ ಅಪ್​ಡೇಟ್ ಮಾಡಿದ್ದು, ಮಂದ ಬೆಳಕಿನ ಕೋಣೆಯಲ್ಲಿ ಟಿವಿ ಪಕ್ಕದಲ್ಲಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಗ ಆಕೆಯ ಬೇಬಿ ಬಂಪ್ ಚಿತ್ರವು ಗೋಚರಿಸುತ್ತದೆ. ಇದು ಟಿವಿ ನೋಡುತ್ತಾ ಗೆಲುವನ್ನು ಸಂಭ್ರಮಿಸಿರುವ ಅಥಿಯಾ ಅವರು ರಾಹುಲ್​ ಪ್ರದರ್ಶನವನ್ನು ಹುರಿದುಂಬ...