Bengaluru, ಮೇ 9 -- ಜೀ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ರೇಟಿಂಗ್ಸ್‌ ಎಷ್ಟು? ಯಾವ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿದೆ, ಕೊನೇ ಸ್ಥಾನದಲ್ಲಿನ ಸೀರಿಯಲ್‌ ಯಾವುದು? ಇಲ್ಲಿದೆ ಅಪ್‌ಡೇಟ್‌ ಮಾಹಿತಿ.

ಇನ್ನು ಮುಕ್ತಾಯದ ಹಂತಕ್ಕೆ ತಲುಪಿರುವ ಸೀರಿಯಲ್‌ಗಳೆಂದರೆ ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ. ಈ ಎರಡು ಸೀರಿಯಲ್‌ಗಳ ಪೈಕಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 2.6 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.

ಅದೇ ರೀತಿ ಜೀ ಕನ್ನಡದ ಒಂದು ಕಾಲದ ನಂಬರ್‌ 1 ಧಾರಾವಾಹಿ ಪುಟ್ಟಕ್ಕನ ಮಕ್ಕಳು 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ 17ನೇ ವಾರದ ಟಿಆರ್‌ಪಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. ಕಳೆದ ಎರಡ್ಮೂರು ವಾರ ಮೊದಲ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ, 7.1 ಟಿಆರ್‌ಪಿ ಪಡೆದು ಕುಸಿತ ಕಂಡಿದೆ.

ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್‌ 17ನೇ ವಾರದ ಟಿಆರ್‌ಪಿಯಲ್ಲಿ 5.3 ರೇಟಿಂಗ್ಸ್‌ ಪಡೆದು, ಆರನೇ ಸ್ಥಾನದಲ್ಲಿದೆ. 16ನೇ ವಾರಕ್ಕೆ ಹೋಲಿ...