ಭಾರತ, ಮೇ 12 -- ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಯಾರು?: ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತ ವಿಶ್ವರೂಪ್ ಎಂದೇ ಜನಪ್ರಿಯರಾಗಿದ್ದ ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ (34) ಅವರು ಇಂದು (ಮೇ 12) ನಸುಕಿನ 3.30ರ ವೇಳೆಗೆ ಮೃತಪಟ್ಟಿರುವುದಾಗಿ ನಟ ಶಿವರಾಜ್ ಕೆಆರ್ ಪೇಟೆ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದರು. ಲೋಬಿಪಿ ಸಮಸ್ಯೆ ಕಾಡಿದ್ದು, ಪಲ್ಸ್ ರೇಟ್ ಕಡಿಮೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ರಾಕೇಶ್ ಪೂಜಾರಿ ಮೃತಪಟ್ಟಿರುವುದಾಗಿ ಶಿವರಾಜ್ ಕೆಆರ್ ಪೇಟೆ ತಿಳಿಸಿದ್ದರು.
ನಾಲ್ಕು ವರ್ಷಗಳ ಹಿಂದೆ ಉದಯವಾಣಿ ಡಿಜಿಟಲ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ರಾಕೇಶ್ ಪೂಜಾರಿ, ತಮ್ಮ ರಂಗ ಬದುಕಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಬಾಲ್ಯದಲ್ಲಿ ಓದಿನಲ್ಲಿ ಮುಂದಿದ್ದ ರಾಕೇಶ್ ಪೂಜಾರಿ, ಡಾಕ್ಟರ್ ಆಗಬೇಕು ಎಂಬ ಕನಸು ಕಂಡಿದ್ದೆ, ಹತ್ತನೇ ತರಗತಿಗೆ ಬಂದಾಗ ಓದು ಕಷ್ಟವೆನಿಸಿತು. ಎಂಜಿನಿಯರ್ ಕೂಡ ಆಗುವುದು ಸಾಧ್ಯವಿಲ್ಲ ಎಂಬ ಭಾವನೆ ಮೂಡಿತು. ಬಳಿಕ ಪಿಯುಸಿ ಓದು ಮು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.