Mysuru, ಏಪ್ರಿಲ್ 29 -- ಕಾಡಿನ ಕಥೆಗಳು: ಕಾವೇರಿ ನದಿ ಬಳುಕುತ್ತ ಹರಿಯುವ ಎಂಟು ನೂರು ಕಿ.ಮಿ ಯಾನದಲ್ಲಿ ಅರಣ್ಯ ಪ್ರದೇಶವೂ ಸಾಕಷ್ಟಿದೆ. ಕಾವೇರಿ ಹುಟ್ಟುವುದೇ ಕೊಡಗಿನ ಅರಣ್ಯದಲ್ಲಿ. ಅಲ್ಲಿಂದ ಬಂಗಾಳಕೊಲ್ಲಿ ಸೇರುವವರೆಗೂ ಕಾವೇರಿ ಸೃಷ್ಟಿಸಿರುವ ಅದೆಷ್ಟೋ ಅದ್ಬುತ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಅದರಲ್ಲಿ ತಲಕಾಡು ಎನ್ನುವ ಐತಿಹಾಸಿಕ ಮಹತ್ವ ಇರುವ ತಾಣವೂ ಕೂಡ ಸೇರಿದೆ. ಅದು ಅರಣ್ಯ ಪ್ರದೇಶ ಇರುವ, ಇತ್ತೀಚಿನ ಮೀಸಲು ಅರಣ್ಯವಾಗಿಯೂ ಮಾರ್ಪಟ್ಟಿರುವ ಪ್ರದೇಶ. ಅಲ್ಲಿ ಕಾವೇರಿ ಹರಿದು ಅಗಾಧ ರಾಶಿಯ ಮರಳನ್ನು ಉಳಿಸಿರುವುದರಿಂದ ತಲಕಾಡಿಗೆ ವಿಶಿಷ್ಟ ಸ್ಥಾನವಿದೆ. ಐತಿಹಾಸಿಕವಾಗಿ ಎಷ್ಟು ಮಹತ್ವ ಇದೆಯೋ ಪರಿಸರವಾಗಿಯೂ ನದಿ ತೀರ, ಅರಣ್ಯ ಪ್ರದೇಶ ಅಷ್ಟೇ ಮಹತ್ವವನ್ನು ಪಡೆದಿವೆ. ಈ ಎರಡು ಅಂಶಗಳು ಪ್ರವಾಸೋದ್ಯಮ ಪ್ರಗತಿಗೆ ಪೂರಕವೂ ಆಗಿವೆ.
ತಲಾ ಮತ್ತು ಕಾಡ ಎಂಬ ಇಬ್ಬರು ಕಿರಾತ ಸೋದರರಿಂದ ಈ ಊರಿಗೆ ತಲಕಾಡು ಎಂದು ಹೆಸರು ಬಂದಿದೆ ಎಂಬುದು ಸ್ಥಳ ಪುರಾಣ. ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಮೈಸೂರು ಜ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.