ಭಾರತ, ಮೇ 6 -- ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಪ್ರಿಕ್ವೆಲ್ (ಕಾಂತಾರ ಚಾಪ್ಟರ್ 1) ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಕಲಾವಿದನೊಬ್ಬ ದುರಂತ ಸಾವು ಕಂಡಿದ್ದಾರೆ. ಮೃತ ದುರ್ದೈವಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ. ಇವರನ್ನುಕೇರಳ ಮೂಲದವರು ಎಂದು ಹೇಳಲಾಗಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಜೂನಿಯರ್ ಕಲಾವಿದ ಅಭಿನಯಿಸುತ್ತಿದ್ದರು ಎನ್ನಲಾಗಿದೆ. ಇಂದು (ಮೇ 6) ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ಪುಣ್ಯಕ್ಷೇತ್ರದ ಬಳಿಯ ಸೌಪರ್ಣಿಕಾ ನದಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನದಿಯಲ್ಲಿ ಸಂಜೆ ಈಜುವ ದೃಶ್ಯ ಶೂಟ್ ಮಾಡುವಾಗ ಕಲಾವಿದ ಕಪಿಲ್ ಅವರು ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ದೈವ ಪಂಜುರ್ಲಿ ನಿನ್ನ ಮುಖ ನೋಡುತ್ತಿದ್ದರೆ ಏನೋ ಕಂಟಕ ಇದೆ ಎಂದು ತಿಳಿಯುತ್ತಿದೆ. ಆದರೆ ಧೃತಿಗೆಡಬೇಡ. ನಿನ್ನ ಸಂಸಾರ (ಚಿತ್ರ ತಂಡ) ಹಾಳು ಮಾಡಲು ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ನಿನ್ನ ಜೊತೆಗಿದ್ದವರೇ ಕೇಡು ಬಯಸುತ್ತಿದ್ದಾರೆ ಎಂದು ಭವಿಷ್ಯ ನುಡಿದಿತ್ತು. ದೈವ ನುಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.